alex Certify
ಕನ್ನಡ ದುನಿಯಾ       Mobile App
       

Kannada Duniya

ಇರಾನ್ ಮಹಿಳೆಯರ ಕಬಡ್ಡಿ ತಂಡದ ಕೋಚ್‌ ಭಾರತದ ಶೈಲಜಾ…!

ಏಷ್ಯನ್ ಗೇಮ್ಸ್ ನ ಮಹಿಳೆಯರ ಕಬಡ್ಡಿ ವಿಭಾಗದಲ್ಲಿ ಈ ಬಾರಿ ಭಾರತಕ್ಕೆ ಸೋಲುಂಟಾಗಿದ್ದು, ಚಿನ್ನದ ಪದಕದ ನಿರೀಕ್ಷೆಯಲ್ಲಿದ್ದ ಭಾರತಕ್ಕೆ ನಿರಾಸೆಯಾಗಿದೆ. ಈ ಸೋಲಿಗೆ ಕಾರಣವಾಗಿದ್ದು, ಇರಾನ್ ಮಹಿಳಾ ಕಬಡ್ಡಿ ತಂಡದ ಕೋಚ್ ಭಾರತದ ಮಹಿಳೆ ಎಂಬುದು ಅಚ್ಚರಿಯ ಸಂಗತಿ.

ಹೌದು. ಬಂಗಾರದ ಪದಕ ಗೆದ್ದ ಇರಾನ್ ತಂಡದ ಕೋಚ್‌ ಭಾರತದ ಶೈಲಜಾ ಜೈನ್‌ ಮೂಲತಃ ನಾಸಿಕ್‌ ನವರು. ಶೈಲಜಾ ಒಂದೂವರೆ ವರ್ಷದ ಹಿಂದೆ ಇರಾನ್ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು.

ನೂರಾರು ಮಕ್ಕಳಿಗೆ ಕಬಡ್ಡಿ ಕೋಚಿಂಗ್ ನೀಡಿ ಹಲವು ವರ್ಷಗಳ ಅನುಭವ ಹೊಂದಿರುವ ಶೈಲಜಾಗೆ ರಾಷ್ಟ್ರೀಯ ತಂಡವೊಂದರ ಕೋಚ್ ಆಗಬೇಕೆಂಬ ಹೆಬ್ಬಯಕೆಯಿತ್ತು. ಇವರ ಆಸೆ ನೆರವೇರಿದ್ದು, ಇರಾನ್ ಮಹಿಳಾ ತಂಡದ ಕಬಡ್ಡಿ ಕೋಚ್ ಆಗಲು ಆಹ್ವಾನ ಬಂದಾಗ. ಇದನ್ನು ಒಪ್ಪಿದ ಶೈಲಜಾ, ತಮ್ಮ ತಂಡ ಚಿನ್ನದ ಪದಕ ಗೆದ್ದೇ ಗೆಲ್ಲಬೇಕೆಂಬ ಗುರಿಯೊಂದಿಗೆ ತರಬೇತಿ ನೀಡಿದ್ದಾರೆ.

ಇದರ ಫಲವಾಗಿ ಇಂದು ಇರಾನ್ ಮಹಿಳಾ ತಂಡ ಕಬಡ್ಡಿಯಲ್ಲಿ ಚಿನ್ನದ ಹಾರಕ್ಕೆ ಕೊರಳೊಡ್ಡಿದೆ. ಶೈಲಜಾ ತಮ್ಮ ಕನಸಿನಂತೆ ವಿಶ್ವದ ಅತ್ಯುತ್ತಮ ಕೋಚ್ ಎಂಬುದನ್ನು ಸಾಬೀತುಪಡಿಸಿದ್ದಾರೆ. ಭಾರತ ಸೋತಿದ್ದಕ್ಕೆ ಬೇಸರವಿದೆ ಎಂದಿರುವ ಶೈಲಜಾ, ಕಬಡ್ಡಿಯನ್ನು ಪ್ರೀತಿಸುವ ನನಗೆ ನನ್ನ ತಂಡ ಗೆದ್ದಿದ್ದು ಖುಷಿ ನೀಡಿದೆ ಎಂದು ಹೇಳುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...