alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ಬ್ಯಾಟಿಂಗ್ ಕೌಶಲ್ಯದ ಹಿಂದಿದ್ದಾನೆ ಹೋಟೆಲ್ ಮಾಣಿ..

sachin

ಸಚಿನ್ ತೆಂಡೂಲ್ಕರ್ ಜಗತ್ತಿನ ಸರ್ವಶ್ರೇಷ್ಠ ಬ್ಯಾಟ್ಸ್ ಮನ್ ಅನ್ನೋದನ್ನು ಎಲ್ಲರೂ ಒಪ್ಪಿಕೊಳ್ತಾರೆ. 34,000 ರನ್ ಬಾರಿಸಿರುವ ವಿಶ್ವದ ಏಕೈಕ ಆಟಗಾರ ಮಾಸ್ಟರ್ ಬ್ಲಾಸ್ಟರ್. ಅಷ್ಟೇ ಅಲ್ಲ 100 ಶತಕ ಸಿಡಿಸಿರುವ ಮೊದಲ ಹಾಗೂ ಏಕೈಕ ಆಟಗಾರ ಎಂಬ ಹೆಗ್ಗಳಿಕೆ ಕೂಡ ಅವರದ್ದು. ತಮ್ಮ ಬ್ಯಾಂಟಿಗ್ ಕೌಶಲ್ಯ ಸುಧಾರಿಸಿದ್ದು ಹೇಗೆ ಅನ್ನೋ ರಹಸ್ಯವನ್ನು ಖುದ್ದು ಸಚಿನ್ ಬಿಚ್ಚಿಟ್ಟಿದ್ದಾರೆ.

ಒಮ್ಮೆ ಸಚಿನ್ ಚೆನ್ನೈನ ಹೋಟೆಲ್ ನಲ್ಲಿ ತಂಗಿದ್ರು, ಹೋಟೆಲ್ ಮಾಣಿಯೊಬ್ಬ ಅವರ ಬಳಿ ಬಂದು ನೀವು ಬೇಜಾರು, ಕೋಪ ಮಾಡಿಕೊಳ್ಳದೇ ಇದ್ರೆ ಒಂದು ಮಾತು ಹೇಳ್ತೀನಿ ಅಂದ. ಸರಿ ಅಂತಾ ಸಚಿನ್ ಕೂಡ ಒಪ್ಪಿಕೊಂಡ್ರು. ನಿಮ್ಮ ಎಲ್ಬೋ ಗಾರ್ಡ್ ಬ್ಯಾಟ್ ಸ್ವಿಂಗ್ ಗೆ ಅಡ್ಡಿ ಮಾಡ್ತಾ ಇದೆ ಅಂತಾ ಆ ವೇಯ್ಟರ್ ಹೇಳಿದ್ದ.

ಅವನ ಮಾತು ಅಕ್ಷರಶಃ ನಿಜವಾಗಿತ್ತು. ಆತ ಹೇಳಿದ ಮೇಲೆ ಸಚಿನ್ ಗೆ ಅದು ಅರಿವಾಗಿತ್ತು, ಕೊನೆಗೆ ಅವರು ತಮ್ಮ ಎಲ್ಬೋ ಗಾರ್ಡ್ ವಿನ್ಯಾಸವನ್ನು ಬದಲಾಯಿಸಿಕೊಂಡ್ರು. ಹಾಗಾಗಿ ಯಾರೇ ನಿಮಗೆ ಸಲಹೆ ಕೊಟ್ರೂ ಅದನ್ನು ತೆರೆದ ಮನಸ್ಸಿನಿಂದ ಸ್ವೀಕರಿಸಿ ಅನ್ನೋದು ಸಚಿನ್ ಸಲಹೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...