alex Certify
ಕನ್ನಡ ದುನಿಯಾ       Mobile App
       

Kannada Duniya

ಮೈದಾನದಲ್ಲೇ ಆತಂಕ ಸೃಷ್ಠಿಸಿದ ಎಂ.ಎಸ್. ಧೋನಿ ಫ್ಯಾನ್

doni-fan

ಮುಂಬೈ: ಟೀಂ ಇಂಡಿಯಾ ಸೀಮಿತ ಓವರ್ ಪಂದ್ಯಗಳ ನಾಯಕ ಮಹೇಂದ್ರ ಸಿಂಗ್ ಧೋನಿ, ಇಂದು ಮುಂಬೈನಲ್ಲಿ ನಡೆದ ಪಂದ್ಯದಲ್ಲಿ ನಾಯಕನಾಗಿ ಕಡೆ ಪಂದ್ಯವಾಡಿದ್ದಾರೆ.

ಭಾರತ ಎ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ಅಭ್ಯಾಸ ಪಂದ್ಯ ನಡೆದಿದ್ದು, ಈ ಸಂದರ್ಭದಲ್ಲಿ ಧೋನಿ ಅಭಿಮಾನಿಯೊಬ್ಬ ಆತಂಕ ಸೃಷ್ಠಿಸಿದ್ದಾನೆ.

ಧೋನಿ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ 26 ರನ್ ಗಳಿಸಿದಾಗ, ಭದ್ರತೆಯನ್ನೂ ಬೇಧಿಸಿ ಮೈದಾನದೊಳಗೆ ಧೋನಿ ಅಭಿಮಾನಿ ನುಗ್ಗಿದ್ದಾನೆ.

‘ಧೋನಿ, ಧೋನಿ’ ಎಂದು ಕೂಗುತ್ತಾ, ಸೀದಾ ಧೋನಿ ಬಳಿಗೆ ಬಂದು ಅವರ ಕಾಲಿಗೆ ನಮಸ್ಕರಿಸಿ, ನಾಯಕತ್ವ ತೊರೆಯದಂತೆ ಮನವಿ ಮಾಡಿದ್ದಾನೆ. ಇದೆಲ್ಲವನ್ನು ಮೈದಾನದಲ್ಲಿದ್ದ ಅಪಾರ ಸಂಖ್ಯೆಯ ಜನ ಆವಾಕ್ಕಾಗಿ ನೋಡಿದ್ದಾರೆ. ಭದ್ರತಾ ಸಿಬ್ಬಂದಿ ಧೋನಿ ಅಭಿಮಾನಿಯನ್ನು ಕರೆದುಕೊಂಡು ಹೋಗಿದ್ದಾರೆ.

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...