alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್ ದ್ರಾವಿಡ್ ಕುರಿತಾದ ಇಂಟರೆಸ್ಟಿಂಗ್ ಸಂಗತಿ

rahul dravidಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್, ತಮ್ಮ ಸಭ್ಯ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಹುಲ್ ದ್ರಾವಿಡ್, ಮಹಿಳಾ ಅಭಿಮಾನಿಯಿಂದ ಫಜೀತಿ ಅನುಭವಿಸಿದ್ದ ಸುದ್ಧಿಯನ್ನು 2 ದಿನಗಳ ಹಿಂದಷ್ಟೆ ಓದಿದ್ದೀರಿ. ಅವರ ಕುರಿತ ಮತ್ತೊಂದು ಇಂಟರೆಸ್ಟಿಂಗ್ ಮಾಹಿತಿ ಇಲ್ಲಿದೆ.

ಒಮ್ಮೆ ಕ್ರಿಕೆಟ್ ಆಡಲು ತೆರಳಿದ್ದ ವೇಳೆ ರಾಹುಲ್ ದ್ರಾವಿಡ್ ಹೋಟೆಲ್ ನಲ್ಲಿ ತಂಗಿದ್ದರಂತೆ. ಆಗ ಅದೇ ಹೋಟೆಲ್ ನಲ್ಲಿ ತಂಗಿದ್ದ ಕೆಲ ಅತಿಥಿಗಳು, ರಾಹುಲ್ ದ್ರಾವಿಡ್ ಕೋಣೆಯಿಂದ ರಾತ್ರಿ ವಿಚಿತ್ರ ಸದ್ದು ಬರುತ್ತಿರುವ ಕುರಿತು ಹೊಟೇಲ್ ಸಿಬ್ಬಂದಿ ಬಳಿ ದೂರು ನೀಡಿದ್ದರು. ಆ ನಂತರ ತಿಳಿದು ಬಂದ ಸುದ್ದಿಯಿಂದ ಅವರುಗಳು ದಂಗಾಗಿದ್ದಾರೆ. ಯಾಕೆ ಅಂತೀರಾ?

ಕ್ರಿಕೆಟ್ ನ್ನು ತಮ್ಮ ಜೀವನದ ಅವಿಭಾಜ್ಯ ಅಂಗವನ್ನಾಗಿಸಿಕೊಂಡಿದ್ದ ರಾಹುಲ್ ದ್ರಾವಿಡ್, ಮಾರನೆಯ ದಿನದ ಆಟಕ್ಕಾಗಿ ರಾತ್ರಿ ವೇಳೆ ಕೊಠಡಿಯಲ್ಲೇ ಅಭ್ಯಾಸ ಮಾಡುತ್ತಿದ್ದರಂತೆ. ಈ ವಿಷಯ ತಿಳಿದ ದೂರು ನೀಡಿದ್ದ ಅತಿಥಿಗಳು, ರಾಹುಲ್ ದ್ರಾವಿಡ್ ರ ಕ್ಷಮೆ ಕೋರಿ, ನೀವು ಪ್ರಾಕ್ಟೀಸ್ ಮುಂದುವರೆಸಿ, ಮಾರನೇ ದಿನದ ಆಟದಲ್ಲಿ ಯಶಸ್ಸು ಗಳಿಸುವಂತೆ ಹಾರೈಸಿದ್ದರಂತೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...