alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಕಿಯಲ್ಲಿ ಪಾಕ್ ಬಗ್ಗು ಬಡಿದ ಭಾರತ

haki-d

ಲಂಡನ್: ಕ್ರಿಕೆಟ್ ನಲ್ಲಿ ಹೋದ ಮಾನ ಹಾಕಿಯಲ್ಲಿ ಬಂದಿದೆ. ಐ.ಸಿ.ಸಿ. ಚಾಂಪಿಯನ್ಸ್ ಟ್ರೋಫಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತ 180 ರನ್ ಗಳ ಅಂತರದಿಂದ ಸೋಲು ಕಂಡಿದೆ.

ಆದರೆ, ಹಾಕಿಯಲ್ಲಿ ಪಾಕಿಸ್ತಾನ ತಂಡವನ್ನು ಬಗ್ಗು ಬಡಿದಿದೆ. 7 -1 ಗೋಲುಗಳ ಅಂತರದಿಂದ ಪಾಕಿಸ್ತಾನವನ್ನು ಮಣಿಸಿದ ಭಾರತ ಕ್ವಾರ್ಟರ್ ಫೈನಲ್ ಪ್ರವೇಶ ಖಚಿತಪಡಿಸಿಕೊಂಡಿದೆ.

ಲಂಡನ್ ನ ಲೀ ವ್ಯಾಲಿ ಹಾಕಿ ಸೆಂಟರ್ ನಲ್ಲಿ ನಡೆದ ವಿಶ್ವ ಹಾಕಿ ಲೀಗ್ ‘ಬಿ’ ಗುಂಪಿನ ಪಂದ್ಯದಲ್ಲಿ ಹರ್ಮನ್ ಪ್ರೀತ್ ಸಿಂಗ್, ತಲ್ವಿಂದರ್ ಸಿಂಗ್, ಆಕಾಶ್ ದೀಪ್ ಸಿಂಗ್ ಅವರ ಅಮೋಘ ಪ್ರದರ್ಶನದಿಂದ 7 -1 ಗೋಲುಗಳ ಅಂತರದಿಂದ ಜಯಗಳಿಸಿದೆ.

ಪಂದ್ಯದ ಆರಂಭದಿಂದಲೂ ಮೇಲುಗೈ ಸಾಧಿಸಿದ ಭಾರತ ಹರ್ಮನ್ ಪ್ರೀತ್ ಸಿಂಗ್, ತಲ್ವೀಂದರ್ ಸಿಂಗ್, ಆಕಾಶ್ ದೀಪ್ ಸಿಂಗ್ ತಲಾ 2 ಗೋಲು, ಪರ್ ದೀಪ್ ಮೋರ್ 1 ಗೋಲು ಬಾರಿಸಿ ತಂಡದ ಗೆಲುವಿನಲ್ಲಿ ಭಾಗಿಯಾದರು. ಜೂನ್ 20 ರಂದು ಭಾರತ ನೆದರ್ ಲೆಂಡ್ ವಿರುದ್ಧ ಲೀಗ್ ನಲ್ಲಿ ಕೊನೆಯ ಪಂದ್ಯವನ್ನು ಆಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...