alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಕಿ ಆಟಗಾರ್ತಿಯಿಂದ ಮೊಬೈಲ್ ಕಳ್ಳನಿಗೆ ಬಿತ್ತು ಗೂಸಾ

ritu-hockey-759ರಾಷ್ಟ್ರೀಯ ಹಾಕಿ ಆಟಗಾರ್ತಿಯೊಬ್ಬರು ತಮ್ಮ ಸ್ನೇಹಿತೆಯರೊಂದಿಗೆ ಬಸ್ ನಲ್ಲಿ ಹೋಗುತ್ತಿದ್ದ ವೇಳೆ ಮೊಬೈಲ್ ಕಳ್ಳನೊಬ್ಬ ಆಟಗಾರ್ತಿ ಸ್ನೇಹಿತೆಯ ಮೊಬೈಲ್ ಅಪಹರಿಸಿದ್ದು, ಇದು ಗಮನಕ್ಕೆ ಬರುತ್ತಲೇ ಆಟಗಾರ್ತಿ ಚಲಿಸುವ ಬಸ್ ನಿಂದ ಇಳಿದು ಕಳ್ಳನನ್ನು ಬೆನ್ನಟ್ಟಿ ಹಿಡಿದಿದ್ದಲ್ಲದೇ ನಾಲ್ಕು ತದುಕಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.

ರಾಷ್ಟ್ರಮಟ್ಟದ ಹಾಕಿ ಪಂದ್ಯಾವಳಿಯಲ್ಲಿ ಹರಿಯಾಣ ಮತ್ತು ದೆಹಲಿ ತಂಡವನ್ನು ಪ್ರತಿನಿಧಿಸಿದ್ದ ರಿತು ಬೋರಿಯಾ ಸಾಹಸ ತೋರಿದವರಾಗಿದ್ದು, ಜನವರಿ 20 ರಂದು ಪಶ್ಚಿಮ ದೆಹಲಿಯ ಪಂಜಾಬಿ ಭಾಗ್ ನಲ್ಲಿ ಈ ಘಟನೆ ನಡೆದಿದೆ.

ರಿತು ತಮ್ಮ ಇಬ್ಬರು ಸ್ನೇಹಿತೆಯರೊಂದಿಗೆ ಬಸ್ ನಲ್ಲಿ ಹೋಗುತ್ತಿದ್ದಾಗ ಅವರ ಸ್ನೇಹಿತೆಯ ಮೊಬೈಲ್ ಅಪಹರಿಸಿದ ಇಬ್ಬರು ಯುವಕರು ಬಸ್ ನಿಂದ ಇಳಿದು ಹೋಗಿದ್ದಾರೆ. ಇದು ಗಮನಕ್ಕೆ ಬರುತ್ತಲೇ ರಿತು, ಚಾಲಕನಿಗೆ ಬಸ್ ನಿಲ್ಲಿಸುವಂತೆ ಸೂಚಿಸಿದ್ದು, ಕಳ್ಳರನ್ನು ಬೆನ್ನಟ್ಟಿದ್ದಾರೆ. ಒಬ್ಬ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, 19 ವರ್ಷದ ದಾಲ್ ಚಂದ್ ಅಲಿಯಾಸ್ ಸನ್ನಿ ಎಂಬಾತ ಸಿಕ್ಕಿ ಬಿದ್ದಿದ್ದಾನೆ. ಆತನಿಂದ ಮೊಬೈಲ್ ವಾಪಾಸ್ ಪಡೆದುಕೊಂಡ ರಿತು ಗೂಸಾ ನೀಡಿ ಬಳಿಕ ಪೊಲೀಸರ ವಶಕ್ಕೊಪ್ಪಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...