alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಕಿ : ಫೈನಲ್ ಪ್ರವೇಶಿಸಿದ ಭಾರತ

hockey

ಏಷ್ಯನ್ ಹಾಕಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಭರ್ಜರಿ ಜಯದೊಂದಿಗೆ ಫೈನಲ್ ಪ್ರವೇಶಿಸಿದೆ. ಮಲೇಷಿಯಾದಲ್ಲಿ ನಡೆದ ಪಂದ್ಯಾವಳಿಯ ಸೆಮಿಪೈನಲ್ ನಲ್ಲಿ ದಕ್ಷಿಣ ಕೊರಿಯಾ ವಿರುದ್ಧ ಭಾರತ ಜಯಗಳಿಸಿದೆ.

ಸೆಮಿಫೈನಲ್ ಪಂದ್ಯದಲ್ಲಿ ಪೆನಾಲ್ಟಿ ಶೂಟೌಟ್ ಮೂಲಕ ಭಾರತ  5-4 (2-2)  ಅಂತರದಿಂದ ದಕ್ಷಿಣ ಕೊರಿಯಾ ವಿರುದ್ಧ ಭರ್ಜರಿ ಜಯಗಳಿಸಿ, ಫೈನಲ್ ಗೆ ಪ್ರವೇಶ ಪಡೆದಿದೆ. ಉಭಯ ತಂಡಗಳು ಮೊದಲಿಗೆ ಉತ್ತಮ ಪ್ರದರ್ಶನ ಕಾಯ್ದುಕೊಂಡು ರೆಗ್ಯುಲೇಷನ್ ಅವಧಿಯಲ್ಲಿ 2-2 ರಲ್ಲಿ ಸಮಬಲ ಸಾಧಿಸಿದ್ದವು. ಭಾರತದ ಪರ ತಲ್ವೀಂದರ್ ಸಿಂಗ್ ಹಾಗೂ ರಮಣ್ ದೀಪ್ ಉತ್ತಮ ಪ್ರದರ್ಶನ ನೀಡಿ, ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ದಕ್ಷಿಣ ಕೊರಿಯಾ ಪರವಾಗಿ ಸಿಯೋ ವೂ ಹಾಗೂ ಯಾಂಗ್ ಜಿ ಹೂನ್ ಉತ್ತಮ ಆಟವಾಡಿದರು. ಅಂತಿಮವಾಗಿ ಭಾರತ ತಂಡ 5-4 (2-2) ಅಂತರದಿಂದ ಜಯಿಸಿ ಫೈನಲ್ ಪ್ರವೇಶಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...