alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಪೇನ್ ಮಣಿಸಿ ಸೆಮಿಫೈನಲ್ ತಲುಪಿದ ಕಿರಿಯರ ಹಾಕಿ ಟೀಂ

india_0frvwqx

ಕಿರಿಯರ ಹಾಕಿ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಉತ್ತಮ ಪ್ರದರ್ಶನ ತೋರುತ್ತಿದೆ. ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತ ಸ್ಪೇನ್ ತಂಡವನ್ನು ಸೋಲಿಸಿ ಸೆಮಿಫೈನಲ್ ಗೆ ಲಗ್ಗೆ ಇಟ್ಟಿದೆ. ಕುತೂಹಲಕಾರಿ ಪಂದ್ಯದಲ್ಲಿ ಭಾರತ 2-1 ಅಂಕಗಳಿಂದ ಗೆಲುವು ತನ್ನದಾಗಿಸಿಕೊಂಡಿದೆ.

ಪಂದ್ಯದಲ್ಲಿ 55 ನಿಮಿಷಗಳ ಕಾಲ ಭಾರತ ಯಾವುದೇ ಗೋಲು ಬಾರಿಸಿರಲಿಲ್ಲ. ಸ್ಪೇನ್, ಆಟ ಆರಂಭವಾಗಿ 22 ನಿಮಿಷದೊಳಗೆ ಒಂದು ಅಂಕ ಪಡೆದಿತ್ತು. ಭಾರತದ ಹಾಕಿ ಅಭಿಮಾನಿಗಳು ನಿರಾಶೆಯಲ್ಲಿ ಕುಳಿತಿದ್ದಾಗ ಗೋಲ್ ಬಾರಿಸಿ ಭರವಸೆ ಮೂಡಿಸಿದ್ದು ಸಿಂಹರಂಜಿತ್. ನಂತ್ರ ಹರ್ಮನ್ಪ್ರೀತ್ ಸಿಂಗ್ ಎರಡನೇ ಗೋಲು ಬಾರಿಸಿ ಗೆಲುವು ತಂದುಕೊಟ್ರು.

ಬೆಲ್ಜಿಯಂ, ಜರ್ಮನಿ ಹಾಗೂ ಆಸ್ಟ್ರೇಲಿಯಾ ತಂಡಗಳು ಈಗಾಗಲೇ ಸೆಮಿಫೈನಲ್ ಪ್ರವೇಶಿಸಿವೆ. ಆಸ್ಟ್ರೇಲಿಯಾ ವಿರುದ್ಧ ಭಾರತ ತಂಡ ಸೆಮಿಫೈನಲ್ ನಲ್ಲಿ ಸೆಣೆಸಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...