alex Certify
ಕನ್ನಡ ದುನಿಯಾ       Mobile App
       

Kannada Duniya

ಜೀವನ ನಿರ್ವಹಣೆಗಾಗಿ ಆಟೋ ಓಡಿಸುತ್ತಿರುವ ರೆಫರಿ

santhoshrefereemanorama_1433764297

ಭಾರತದಲ್ಲಿ ಕ್ರೀಡೆ ಎಂದರೆ ಕೇವಲ ಕ್ರಿಕೆಟ್ ಮಾತ್ರ. ಕ್ರಿಕೆಟ್ ಗೆ ಸಿಗುವಷ್ಟು ಪ್ರೋತ್ಸಾಹ, ಉತ್ತೇಜನ ಬೇರೆ ಕ್ರೀಡೆಗಳಿಗೆ ಸಿಗುವುದಿಲ್ಲ. ಕ್ರಿಕೆಟ್ ನಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಆದರೆ, ಅನ್ಯ ಕ್ರೀಡೆಗಳ ಆಟಗಾರರಿಗೆ ಜೀವನ ನಡೆಸುವುದೇ ಕಷ್ಟ. ಇದಕ್ಕೆ ಅತ್ಯುತ್ತಮ ಉದಾಹರಣೆಯಾಗಬಹುದಾದ ಅಪರೂಪದ ಪ್ರಕರಣ ಇಲ್ಲಿದೆ ನೋಡಿ.

ಇವರ ಹೆಸರು ಎಂ. ಪಿ. ಸಂತೋಷ್ ಕುಮಾರ್ (40). ಕೇರಳದ ಕೊಟ್ಟಾಯಂನವರಾದ ಸಂತೋಷ್ ಕುಮಾರ್ ಅವರಿಗೆ ಫುಟ್ ಬಾಲ್ ಎಂದರೆ ಪಂಚಪ್ರಾಣ. ಫುಟ್ ಬಾಲ್ ಆಟವಾಡಿ ಅವರಿಗೆ ಮೊಣಕಾಲಿನ ಸಮಸ್ಯೆ ತಲೆದೋರಿದೆ. ಆದರೂ ಅವರೇನೂ ಇದರಿಂದ ವಿಚಲಿತರಾಗಿಲ್ಲ. ಇದೇ ಕ್ಷೇತ್ರದಲ್ಲಿ ಸಾಧನೆ ಮಾಡಬೇಕೆಂಬ ಉದ್ದೇಶದಿಂದ ಆಟದ ಸಂಪೂರ್ಣ ಮಜಲುಗಳನ್ನು ತಿಳಿದುಕೊಂಡು ಅಂಪೈರಿಂಗ್ ಪರೀಕ್ಷೆಯನ್ನು ಕೂಡ ಬರೆದಿದ್ದಾರೆ. ಸಂತೋಷ್ ಕುಮಾರ್ ಅವರ ಪರಿಶ್ರಮದ ಪ್ರಯತ್ನಕ್ಕೆ ಫಲಕೊಟ್ಟಿದೆ. ಅವರು ಪರೀಕ್ಷೆಯಲ್ಲಿ ಪಾಸಾಗಿದ್ದಾರೆ.

ಸಂತೋಷ್ ಕುಮಾರ್ ಫಿಫಾ ಮಾನ್ಯತೆ ಪಡೆದುಕೊಂಡ ದೇಶದ ಆರು ಮಂದಿಯಲ್ಲಿ ಒಬ್ಬರಾಗಿದ್ದಾರೆ. ಆದರೆ, ಹೀಗಿದ್ದರೂ ಜೀವನ ನಿರ್ವಹಣೆಗೆ ಆಟೋ ಓಡಿಸುವ ಕಾಯಕ ಮಾಡುತ್ತಾರೆ. ಇದರೊಂದಿಗೆ ಮಕ್ಕಳಿಗೆ ಫುಟ್ ಬಾಲ್ ತರಬೇತಿ ನೀಡುತ್ತಾರೆ. ಫಿಫಾ ಮಾನ್ಯತೆ ಪಡೆದ ರೆಫರಿ ಆದರೂ ಜೀವನ ನಿರ್ವಹಣೆಗಾಗಿ ಆಟೋ ಓಡಿಸುತ್ತಿದ್ದಾರೆ. ಅದೇ ಕ್ರಿಕೆಟ್ ನಲ್ಲಿ ಆಗಿದ್ದರೆ ಆ ಮಾತೇ ಬೇರೆಯಾಗುತ್ತಿತ್ತು ಎಂಬುದಂತೂ ನಿಜ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...