alex Certify
ಕನ್ನಡ ದುನಿಯಾ       Mobile App
       

Kannada Duniya

ಫೀಲ್ಡಿಂಗ್ ವೇಳೆ ಯಜುವೇಂದ್ರ ಚಾಹಲ್ ಕನ್ನಡಕ ಧರಿಸಿದ್ದ ಕಾರಣವೇನು ಗೊತ್ತಾ?

ಟೀಂ ಇಂಡಿಯಾ ಆಟಗಾರ ಯಜುವೇಂದ್ರ ಚಾಹಲ್ ದಕ್ಷಿಣ ಆಫ್ರಿಕಾ ವಿರುದ್ಧದ 6 ಪಂದ್ಯಗಳಲ್ಲಿ ಒಟ್ಟು 16 ವಿಕೆಟ್ ಕಬಳಿಸುವ ಮೂಲಕ ಯಶಸ್ವಿ ಬೌಲರ್ ಎನಿಸಿಕೊಂಡಿದ್ದಾರೆ. ಭಾನುವಾರದಂದು ಜೋಹಾನ್ಸ್ಬರ್ಗ್ ನ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾವಳಿ ವೇಳೆ ಫೀಲ್ಡಿಂಗ್ ಮಾಡುವಾಗ ಯಜುವೇಂದ್ರ ಚಾಹಲ್ ಕನ್ನಡಕ ಧರಿಸಿದ್ದರು.

ಬೌಲಿಂಗ್ ಹಾಗೂ ಬ್ಯಾಟಿಂಗ್ ಮಾಡುವಾಗ ಕನ್ನಡಕ ಧರಿಸದ ಯಜುವೇಂದ್ರ ಚಾಹಲ್ ಫೀಲ್ಡಿಂಗ್ ಮಾಡುವಾಗ ಮಾತ್ರ ಕನ್ನಡಕ ಧರಿಸಿರುವುದು ಕ್ರಿಕೆಟ್ ಪ್ರೇಮಿಗಳಿಗೆ ಕುತೂಹಲ ಮೂಡಿಸಿತ್ತು. ಇದೀಗ ಯಜುವೇಂದ್ರ ಚಾಹಲ್ ಅವರ ತಂದೆ ಈ ಕುರಿತ ಕಾರಣವನ್ನು ಬಹಿರಂಗಪಡಿಸಿದ್ದಾರೆ.

ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ತಮ್ಮ ಪುತ್ರ ನೇತ್ರ ವೈದ್ಯರನ್ನು ಭೇಟಿ ಮಾಡಿದ್ದು, ಅವರ ಸಲಹೆಯಂತೆ ಯಾವಾಗಲಾದ್ರು ಒಮ್ಮೆ ಕನ್ನಡಕ ಧರಿಸುತ್ತಾರೆ. ಯಜುವೇಂದ್ರ ಚಾಹಲ್ ಈಗ ತೆರಿಗೆ ಇಲಾಖೆಯ ಇನ್ಸ್ ಪೆಕ್ಟರ್ ರಾಗಿ ನೇಮಕಗೊಂಡಿದ್ದು, ದಕ್ಷಿಣ ಆಫ್ರಿಕಾ ಪ್ರವಾಸದಿಂದ ಮರಳಿದ ಬಳಿಕ ಚಾರ್ಜ್ ವಹಿಸಿಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ. ಈ ಹುದ್ದೆಗೆ ವೈದ್ಯಕೀಯ ಪರೀಕ್ಷೆ ಕಡ್ಡಾಯವಾಗಿದ್ದ ಕಾರಣ ನೇತ್ರ ಪರೀಕ್ಷೆ ಸಂದರ್ಭದಲ್ಲಿ ಕನ್ನಡಕಕ್ಕೆ ವೈದ್ಯರು ಶಿಫಾರಸ್ಸು ಮಾಡಿದ್ದರೆಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...