alex Certify
ಕನ್ನಡ ದುನಿಯಾ       Mobile App
       

Kannada Duniya

ಫಿಪಾಗೆ ಬರ್ತಿನಿ ಅಂದವ ಕೊನೆ ಕ್ಷಣದಲ್ಲಿ ಕೈ ಕೊಟ್ಟ; ಗೆಳೆಯರು ಮಾಡಿದ್ದೇನು ಗೊತ್ತಾ…?

ಫಿಫಾ ವಿಶ್ವ ಕಪ್ ಫುಟ್ಬಾಲ್ 2018 ರಲ್ಲಿ ಒಂದು ವಿಚಿತ್ರ ಘಟನೆ ನಡೆದಿದೆ. ಸ್ಟೇಡಿಯಂಫುಟ್ಬಾಲ್ ನಲ್ಲಿ ಜನರ ಜೊತೆಗೆ ಯುವಕನೊಬ್ಬನ ಕಟೌಟ್ ಕಾಣಿಸಿಕೊಳ್ತಿದೆ.

ಇದೇನಪ್ಪಾ ವಿಚಿತ್ರ ಅಂತ ನೋಡೋಕೆ ಹೋದ್ರೆ ಅಲ್ಲಿ ಕಾಣೋದು, ಮಾತು ತಪ್ಪಿದ ಕಾರಣಕ್ಕೆ ಸ್ನೇಹಿತನೊಬ್ಬ ಕಟೌಟ್ ಆದ ಕಥೆ.

ಮೆಕ್ಸಿಕೋದ ಯುವಕರಾದ ಡೇನಿಯಲ್, ಮ್ಯಾಥ್ಯೂ ರಾಬರ್ಟ್ ಮತ್ತು ಕ್ಸೇವಿಯರ್ ಅಮ್ಡೋರ್ ಬೆಸ್ಟ್ ಬಡ್ಡೀಸ್ ಅಂತಾನೇ ಅಂದುಕೊಂಡಿದ್ದರು. ಫಿಫಾ ವಿಶ್ವ ಕಪ್ ನೋಡೋಕ್ಕಂತಾ ಎಲ್ಲರೂ ರಷ್ಯಾಗೆ ಹೊರಟು ನಿಂತರು.

ಆದ್ರೆ ಕೊನೆ ಕ್ಷಣದಲ್ಲಿ ಕ್ಸೇವಿಯರ್ ರಷ್ಯಾಗೆ ಬರೋದಿಲ್ಲ ಅಂತ ಹೇಳಿಬಿಟ್ಟ. ಆಗ ಕ್ಸೇವಿಯರ್ ನ ಬಿಟ್ಟು ಉಳಿದವರೆಲ್ಲಾ ರಷ್ಯಾಗೆ ಹೊರಟರು. ಆದ್ರೆ ಸುಮ್ಮನೆ ಹೋಗಲಿಲ್ಲ. ನಾನು ಬರ್ತೀನಿ ಅಂತ ಹೇಳಿ ಕೊನೆ ಕ್ಷಣದಲ್ಲಿ ಕೈ ಕೊಟ್ಟ ಗೆಳೆಯನ ಕಟೌಟ್ ನ್ನು ಜೊತೆಗೆ ತೆಗೆದುಕೊಂಡು ಹೋದರು.

ಫಿಫಾ ಫುಟ್ಬಾಲ್ ಪಂದ್ಯಾವಳಿ ಯಾವ ಮ್ಯಾಚ್ ನೋಡೋಕೆ ಹೋದ್ರು ಅಲ್ಲಿಗೆ ತನ್ನ ಸ್ನೇಹಿತನ ಕಟೌಟ್ ಜೊತೆಗೆ ತೆಗೆದುಕೊಂಡು ಹೋಗ್ತಿದ್ದಾರೆ. ಕ್ಸೇವಿಯರ್ ಚಿತ್ರ ಇರೋ ಟೀ ಶರ್ಟ್ ಮೇಲೆ ಗರ್ಲ್ ಫ್ರೆಂಡ್ ನನ್ನನ್ನ ಫಿಫಾಗೆ ಹೋಗದಂತೆ ತಡೆದುಬಿಟ್ಟಳು ಅನ್ನೋ ಫನ್ನಿ ಸ್ಟೇಟ್ಮೆಂಟ್ ಕೂಡ ಬರೆಸಿದ್ದಾರೆ.

ಕ್ಸೇವಿಯರ್ಗೆ ತಾನೇನು ಮಿಸ್ ಮಾಡಿಕೊಳ್ತಿದ್ದೀನಿ ಅನ್ನೋದು ಗೊತ್ತಾಗಬೇಕು ಅನ್ನೋ ಕಾರಣಕ್ಕೆ ಹೀಗೆ ಮಾಡ್ತಿದ್ದೀವಿ ಅಂತ ಒಬ್ಬರು ಹೇಳಿದ್ರೆ, ಅವನು ಇದನ್ನ ನೋಡಿಯಾದ್ರು ನಮ್ಮ ಜೊತೆಯಾಗ್ಲಿ ಅನ್ನೋ ರೀಸನ್ ಮತ್ತೊಬ್ಬರು ಹೇಳ್ತಾರೆ. ಫ್ರೆಂಡ್ಶಿಪ್ ಅಂಡ್ ಷೇರ್ ಅಂಡ್ ಕೇರ್ ಅನ್ನೋದು ಇದಕ್ಕೆ ಅಲ್ವಾ…!

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...