alex Certify
ಕನ್ನಡ ದುನಿಯಾ       Mobile App
       

Kannada Duniya

ನೀವೆಂದೂ ನೋಡಿರದ ವಿರಾಟ್ ಕೊಹ್ಲಿ

kohli 301

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಆಸ್ಟ್ರೇಲಿಯಾ ವಿರುದ್ಧದ ಟಿ-20 ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ ನಂತರ, ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ಕೊಹ್ಲಿ ಬ್ಯಾಟಿಂಗ್ ಅನ್ನು ಎಲ್ಲರೂ ಕೊಂಡಾಡಿದ್ದಾರೆ.

ವಿರಾಟ್ ಕೊಹ್ಲಿ ಹೊಸ ಟ್ರೆಂಡ್ ಸೃಷ್ಠಿಸಿದ್ದಾರೆ. ಎಲ್ಲೆಲ್ಲೂ ಕೊಹ್ಲಿ ಎನ್ನುವಂತಾಗಿದೆ. ಇಂತಹ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯ ಅಪರೂಪದ ಚಿತ್ರಗಳು ಇಲ್ಲಿವೆ ನೋಡಿ. ಬಾಲ್ಯದಲ್ಲಿ ಕೊಹ್ಲಿ ತಂದೆಯ ಮುದ್ದಿನ ಮಗನಾಗಿದ್ದರು. ಕೊಹ್ಲಿಯ ಕ್ರಿಕೆಟ್ ಆಟದ ಕನಸಿಗೆ ನೀರೆರೆದು ಪೋಷಿಸಿದ್ದ ಅಪ್ಪ ಈಗಿಲ್ಲ. ಅಮ್ಮನೇ ಕೊಹ್ಲಿಗೆ ಎಲ್ಲಾ. ಅಮ್ಮನ ಅಡುಗೆ ಕೆಲಸದಲ್ಲಿಯೂ ಕೊಹ್ಲಿ ನೆರವಾಗುತ್ತಾರೆ. ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಪರವಾಗಿ ಆಡುವಾಗ ಕೋಬ್ರಾ ಕೂಡ ಆಗುತ್ತಾರೆ.

ಅಂತಹ ವಿರಾಟ್ ಕೊಹ್ಲಿ ಚಿಕ್ಕವರಿದ್ದಾಗ ಸಹೋದರಿ, ಸಹೋದರನೊಂದಿಗೆ ತೆಗೆಸಿಕೊಂಡ ಮುದ್ದಾದ ಫೋಟೋ ಗಮನ ಸೆಳೆಯುತ್ತದೆ. ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಜೊತೆಗೆ ತಿರುಗಾಡಿದ ಅಪರೂಪದ ಫೋಟೋ ಕೂಡ ಇಲ್ಲಿದೆ. ವಿರಾಟ್ ಕೊಹ್ಲಿ ಭಾರತ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸುವ ಭರವಸೆಯ ಆಟಗಾರ. ಕೊಹ್ಲಿ ಆಟವೆಂದರೆ ಅಭಿಮಾನಿಗಳಿಗೆ ಹಬ್ಬ. ಕೊಹ್ಲಿ ಆಟ ಮಾತ್ರವಲ್ಲ, ಜೀವನದ ಬಗ್ಗೆಯೂ ಕುತೂಹಲ ಜಾಸ್ತಿ.

1600

 

3600

 

6600

 

8600

 

8600

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...