alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯ ಕಲಕುವ ಘಟನೆ: ತಂದೆಗೆ ಕೊನೆಗೂ ತೋರಿಸಲಾಗಲಿಲ್ಲ ‘ಚಿನ್ನ’ದ ಪದಕ

ಇನ್ನೇನು ತಾನು ಏಷ್ಯಾಡಿನಲ್ಲಿ ಗೆದ್ದ ಪದಕವನ್ನು ತನ್ನ ಪ್ರೀತಿಯ ಅಪ್ಪನ ಮುಂದಿಟ್ಟು ಅವರ ಮುಖದಲ್ಲಿನ ಸಂಭ್ರಮವನ್ನು ಕಾಣಬೇಕೆಂದಿದ್ದರು ತೇಜಿಂದರ್ ಪಾಲ್ ಸಿಂಗ್. ಇದಕ್ಕಾಗಿ ಹಲವು ವರ್ಷಗಳ ಕಾಲ ಆತ ಪಟ್ಟ ಪರಿಶ್ರಮ ಕೊನೆಗೂ ಫಲ ನೀಡಿತ್ತು.

ಜಕಾರ್ತದಲ್ಲಿ ಶಾಟ್ಪುಟ್ ಚಾಂಪಿಯನ್ ಆದ ಈ ಯುವಕ, ಸ್ವರ್ಣ ಪದಕವನ್ನೇ ತನ್ನದಾಗಿಸಿಕೊಂಡಿದ್ದ. ಆದರೆ ಮಗನ ಈ ಸಾಧನೆಗಾಗಿ ಹಲವು ವರ್ಷಗಳ ಕಾಲ ತಮ್ಮ ಜೀವವನ್ನೇ ತೇಯ್ದ ತಂದೆಗೆ ಕೊಡುಗೆಯಾಗಿ ನೀಡಬೇಕೆಂಬ ತೇಜಿಂದರ್ ಹಂಬಲ ಮಾತ್ರ ಕೊನೆಗೂ ಈಡೇರಲೇ ಇಲ್ಲ.

ಎರಡು ವರ್ಷದಿಂದ ಕ್ಯಾನ್ಸರ್ ಪೀಡಿತರಾಗಿದ್ದ ತೇಜಿಂದರ್ ತಂದೆ, ಕೆಲ ಸಮಯದಿಂದ ಹಾಸಿಗೆ ಪೀಡಿತರಾಗಿದ್ದರು. ತಮ್ಮ ಮಗನನ್ನು ಪದಕದೊಂದಿಗೆ ಕಾಣಬೇಕೆಂಬುದು ಅವರ ಇಚ್ಛೆಯಾಗಿತ್ತು.

ಈ ಬಾರಿ ತೇಜಿಂದರ್ ಏಷ್ಯಾಡ್ ಗೆ ತೆರಳಬೇಕಾದರೆ ತಂದೆಯ ಆರೋಗ್ಯ ಹದಗೆಟ್ಟಿತ್ತು. ಈ ಒತ್ತಡವನ್ನು ನಿಭಾಯಿಸಿಯೇ ಸ್ವರ್ಣ ಗೆದ್ದ ಪಂಜಾಬಿನ ಕಟ್ಟಾಳು ಸ್ಪರ್ಧೆ ಮುಗಿದೊಡನೆ ಪಂಜಾಬ್ ನಲ್ಲಿರುವ ತಮ್ಮ ಮನೆಗೆ ಆಗಮಿಸುತ್ತಿದ್ದರು. ಆದರೆ ದೆಹಲಿಯಲ್ಲಿರುವಾಗಲೇ ತೇಜಿಂದರ್ ತಂದೆಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...