alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಹಮ್ಮದ್ ಶಮಿ ಭೇಟಿಗೆ ಮುಂದಾದ ಪತ್ನಿ

ಟೀಮ್ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ವಿರುದ್ದ ಹಲವು ಗುರುತರ ಆರೋಪಗಳನ್ನು ಮಾಡಿದ್ದ ಪತ್ನಿ ಹಸೀನ್ ಜಹಾನ್ ಈಗ ಶಮಿಯನ್ನು ಭೇಟಿಯಾಗಲು ಮುಂದಾಗಿದ್ದಾರೆ. ಶಮಿಯನ್ನು ಭೇಟಿಯಾಗಲು ಹಲವು ಬಾರಿ ಯತ್ನಿಸಿದರೂ ಅದು ಸಾಧ್ಯವಾಗಿಲ್ಲವೆಂದು ಹಸೀನ್ ಹೇಳಿದ್ದಾರೆ.

ಡೆಹ್ರಾಡೂನ್ ನಿಂದ ನವದೆಹಲಿಗೆ ಶಮಿ ಬರುತ್ತಿದ್ದ ವೇಳೆ ಅವರ ಕಾರು ಟ್ರಕ್ ಒಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ತಲೆಗೆ ಗಾಯವಾಗಿದ್ದು, ಈ ಹಿನ್ನಲೆಯಲ್ಲಿ ಪತಿಯನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿರುವ ಹಸೀನ್, ಶಮಿ ತಮಗೆ ಏನೇ ಅನ್ಯಾಯ ಮಾಡಿದ್ದರೂ ಆತ ಈಗಲೂ ನನ್ನ ಪತಿ ಎಂದಿದ್ದಾರೆ.

ಮಗಳೊಂದಿಗೆ ಶಮಿಯನ್ನು ಭೇಟಿಯಾಗಲು ಬಯಸಿ ಹಲವು ಬಾರಿ ಕರೆ ಮಾಡಿದರೂ ಉತ್ತರಿಸುತ್ತಿಲ್ಲ. ಶಮಿ ಕುಟುಂಬಸ್ಥರು ಆತ ಈಗ ಎಲ್ಲಿದ್ದಾರೆಂಬ ಮಾಹಿತಿ ನೀಡುತ್ತಿಲ್ಲ. ಶಮಿ ಗುಣಮುಖರಾಗಲೆಂದು ದೇವರಲ್ಲಿ ಪ್ರಾರ್ಥಿಸುವುದಾಗಿ ಹಸೀನ್ ಹೇಳಿದ್ದಾರೆ.

ಶಮಿ ವಿರುದ್ದ ಈ ಹಿಂದೆ ಹಸೀನ್ ಮ್ಯಾಚ್ ಫಿಕ್ಸಿಂಗ್ ಆರೋಪ ಹೊರೆಸಿದ್ದು, ಈ ಕುರಿತು ತನಿಖೆ ನಡೆಸಿದ್ದ ಬಿಸಿಸಿಐ ಕ್ಲೀನ್ ಚಿಟ್ ನೀಡಿದೆ. ಈ ಹಿನ್ನಲೆಯಲ್ಲಿ ಪ್ರಸಕ್ತ ಐಪಿಎಲ್ ನಲ್ಲಿ ಡೆಲ್ಲಿ ಡೇವಿಲ್ಸ್ ಪರ ಆಟವಾಡಲು ಶಮಿ ಹಾದಿ ಸುಗಮವಾದಂತಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...