alex Certify
ಕನ್ನಡ ದುನಿಯಾ       Mobile App
       

Kannada Duniya

ಶಮಿ ಪತ್ನಿಗೆ ಬರ್ತಿದೆಯಂತೆ ಬೆದರಿಕೆ ಕರೆ

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಪತ್ನಿ ಹಸೀನ್ ರಕ್ಷಣೆ ನೀಡುವಂತೆ ಪೊಲೀಸರ ಮೊರೆ ಹೋಗಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಹಸೀನ್ ಗೆ ಬೆದರಿಕೆ ಕರೆಗಳು ಬರ್ತಿವೆಯಂತೆ. ಹಾಗಾಗಿ ರಕ್ಷಣೆ ನೀಡುವಂತೆ ಹಸೀನ್ ಕೊಲ್ಕತ್ತಾ ಪೊಲೀಸರಿಗೆ ಮಂಗಳವಾರ ಮನವಿ ಸಲ್ಲಿಸಿದ್ದಾರೆ.

ಈ ಬಗ್ಗೆ ಹಸೀನ್ ಪರ ವಕೀಲ ಜಾಕೀರ್ ಹುಸೇನ್ ಮಾಹಿತಿ ನೀಡಿದ್ದಾರೆ. ಹಸೀನ್ ರಿಗೆ ಸಾಮಾಜಿಕ ಜಾಲತಾಣಗಳಿಂದ ಬೆದರಿಕೆ ಬರ್ತಿದೆ. ಹಸೀನ್ ಮನೆಯಿಂದ ಹೊರ ಬೀಳಲು ಹೆದರುವಂತಾಗಿದೆ. ಹಸೀನ್ ಗೆ ರಕ್ಷಣೆಯ ಅವಶ್ಯಕತೆಯಿದೆ. ಈಗಾಗಲೇ ಪೊಲೀಸರಿಗೆ ರಕ್ಷಣೆ ನೀಡುವಂತೆ ಮನವಿ ಮಾಡಲಾಗಿದೆ ಎಂದಿದ್ದಾರೆ.

ಹಸೀನ್ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಭೇಟಿ ಮಾಡಲು ಬಯಸಿದ್ದಾರಂತೆ. ಮಮತಾ ಬ್ಯಾನರ್ಜಿ ಜೊತೆ ಈ ಬಗ್ಗೆ ಮಾತನಾಡಿ ಬೆಂಬಲ ಬಯಸುವ ನಿರ್ಧಾರಕ್ಕೆ ಹಸೀನ್ ಬಂದಿದ್ದಾರಂತೆ. ಕೊಲ್ಕತ್ತಾ ಪೊಲೀಸರ ಕಾರ್ಯಕ್ಕೂ ಹಸೀನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆಂದು ಹುಸೇನ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...