alex Certify
ಕನ್ನಡ ದುನಿಯಾ       Mobile App
       

Kannada Duniya

ತುಂಡುಡುಗೆ ತೊಟ್ಟಿದ್ದ ವರದಿಗಾರ್ತಿಗೆ ಸಂದರ್ಶನ ನಿರಾಕರಿಸಿದ ಕ್ರಿಕೆಟರ್

amlainterview_1454822980

ದಕ್ಷಿಣ ಅಫ್ರಿಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಹಶೀಂ ಅಮ್ಲಾ ತಮ್ಮ ಸಂದರ್ಶನ ಮಾಡಲು ಬಂದಿದ್ದ ವರದಿಗಾರ್ತಿಯೊಬ್ಬಳು ತುಂಡುಡುಗೆ ತೊಟ್ಟಿದ್ದಾಳೆಂಬ ಕಾರಣಕ್ಕೆ ಸಂದರ್ಶನ ನೀಡಲು ನಿರಾಕರಿಸಿ ಸುದ್ದಿಯಾಗಿದ್ದಾರೆ.

ಈ ವರದಿಗಾರ್ತಿ ಮೊದಲೇ ಸಂದರ್ಶನ ನಿಗದಿಪಡಿಸಿಕೊಂಡಿದ್ದು, ಅದಕ್ಕಾಗಿ ಸಿದ್ದವಾಗಿ ಹೋಗಿದ್ದರು. ಆದರೆ ಅವರು ಮೊಣಕಾಲು ಕಾಣುವಂತಹ ಸ್ಕರ್ಟ್ ಧರಿಸಿದ್ದರಿಂದ ಹಶೀಂ ಅಮ್ಲಾ ಸಂದರ್ಶನ ನೀಡಲು ನಿರಾಕರಿಸಿದ್ದಾರಲ್ಲದೇ ಈ ವಿಚಾರವನ್ನು ಆಯೋಜಕರಿಗೂ ತಿಳಿಸಿದ್ದಾರೆ.

ಕೊನೆಗೆ ಮೈತುಂಬಾ ಬಟ್ಟೆ ಧರಿಸಿ ಬಂದ ವರದಿಗಾರ್ತಿ, ಹಶೀಂ ಅಮ್ಲಾರ ಸಂದರ್ಶನ ಪಡೆಯಲು ಯಶಸ್ವಿಯಾಗಿದ್ದಾರಂತೆ. ಹಶೀಂ ಅಮ್ಲಾ ಈ ಹಿಂದೆಯೂ, ಪ್ರಾಯೋಜಕತ್ವ ವಹಿಸಿದ್ದ ಬೀರ್ ಕಂಪನಿಯ ಲೋಗೋ ಉಳ್ಳ ಜರ್ಸಿ ಧರಿಸಲು ನಿರಾಕರಿಸಿದ್ದರಲ್ಲದೇ ಅದಕ್ಕಾಗಿ ದಂಡವನ್ನೂ ತೆತ್ತು ಸುದ್ದಿಯಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...