alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರದ ಸನ್ಮಾನ ಬಹಿಷ್ಕರಿಸಲು ಮುಂದಾದ ಅಥ್ಲೀಟ್ಸ್, ಕಾರಣ…?

ಇತ್ತೀಚೆಗಷ್ಟೆ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪದಕ ಗೆದ್ದಿರುವ ಹರಿಯಾಣದ ಅಥ್ಲೀಟ್ ಗಳು ಸರ್ಕಾರದ ಸನ್ಮಾನ ಸಮಾರಂಭವನ್ನೇ ಬಹಿಷ್ಕರಿಸಲು ಮುಂದಾಗಿದ್ದಾರೆ. ನಾಳೆ ಈ ಸಮಾರಂಭ ನಡೆಯಬೇಕಿದೆ.

ಆದ್ರೆ ಸರ್ಕಾರ ಬಹುಮಾನ ಮೊತ್ತದಲ್ಲಿ ಕಡಿತ ಮಾಡಲು ಮುಂದಾಗಿರುವುದರಿಂದ ಅಥ್ಲೀಟ್ ಗಳು ಸಮಾರಂಭ ಬಹಿಷ್ಕರಿಸೋದಾಗಿ ಹೇಳಿದ್ದಾರೆ. ಚಿನ್ನದ ಪದಕ ವಿಜೇತರಿಗೆ 1.5 ಕೋಟಿ, ಬೆಳ್ಳಿ ಗೆದ್ದವರಿಗೆ 75 ಲಕ್ಷ ಹಾಗೂ ಕಂಚಿನ ಪದಕ ಗೆದ್ದವರಿಗೆ ಸರ್ಕಾರ 50 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.

ಈಗ ದಿಢೀರನೆ ಬಹುಮಾನ ಮೊತ್ತ ಕಡಿತಕ್ಕೆ ಮುಂದಾಗಿರೋದು ಅಥ್ಲೀಟ್ ಗಳಿಗೆ ಬೇಸರ ಮೂಡಿಸಿದೆ. ದೇಶಕ್ಕಾಗಿ ಆಡಿ ಹೆಮ್ಮೆ ತಂದ ತಮಗೆ ಸರ್ಕಾರ ಮಾಡ್ತಿರೋ ಅಗೌರವ ಇದು ಅಂತಾ ಅಥ್ಲೀಟ್ ಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಥ್ಲೀಟ್ ಗಳು ಸಮಾರಂಭ ಬಹಿಷ್ಕರಿಸಿದ್ದೇ ಆದಲ್ಲಿ ಅವರಿಗೆ ಬಹುಮಾನ ಮೊತ್ತ ವಿತರಿಸುವುದಿಲ್ಲ ಅಂತಾ ಹರಿಯಾಣದ ಕ್ರೀಡಾ ಸಚಿವರು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...