alex Certify
ಕನ್ನಡ ದುನಿಯಾ       Mobile App
       

Kannada Duniya

ಸರ್ಕಾರ ಗಿಫ್ಟ್ ಕೊಟ್ಟಿದ್ದ ಹಸುವನ್ನು ವಾಪಸ್ ಮಾಡ್ತಿದ್ದಾರೆ ಬಾಕ್ಸರ್ಸ್

ಹರಿಯಾಣ ಸರ್ಕಾರ ರಾಜ್ಯದ ಕ್ರೀಡಾ ಸಾಧಕರಿಗೆ ಒಂದೊಂದು ಹಸುವನ್ನು ಉಡುಗೊರೆಯಾಗಿ ನೀಡಿತ್ತು. ಮಹಿಳೆಯರ ಯೂತ್ ವರ್ಲ್ಡ್ ಬಾಕ್ಸಿಂಗ್ ಚಾಂಪಿಯನ್ಷಿಪ್ ನಲ್ಲಿ ಪದಕ ಗೆದ್ದಿದ್ದ 6 ಕ್ರೀಡಾಪಟುಗಳಿಗೆ ಹಸುವನ್ನು ಗಿಫ್ಟ್ ಆಗಿ ಕೊಡಲಾಗಿತ್ತು.

ಹಸುವಿನ ಹಾಲಿನಲ್ಲಿರುವ ಪೋಷಕಾಂಶಗಳು, ಬಾಕ್ಸರ್ ಗಳಿಗೆ ಅದರಿಂದಾಗುವ ಪ್ರಯೋಜನಗಳ ಬಗ್ಗೆ ಕೂಡ ಸಚಿವ ಓಂ ಪ್ರಕಾಶ್ ಧನ್ಕರ್ ಹೇಳಿಕೊಂಡಿದ್ದರು. ಆದ್ರೀಗ ಸರ್ಕಾರ ಕೊಟ್ಟಿದ್ದ ಹಸುಗಳನ್ನು ಬಾಕ್ಸರ್ ಗಳು ಹಿಂದಿರುಗಿಸುತ್ತಿದ್ದಾರೆ.

ಯಾಕಂದ್ರೆ ಆ ಹಸುಗಳು ಹಾಲನ್ನೇ ಕೊಡುತ್ತಿಲ್ಲವಂತೆ. ಅಷ್ಟೇ ಅಲ್ಲ ಮನುಷ್ಯರಿಗೆ ತೊಂದರೆ ಮಾಡುತ್ತಿವೆ ಅಂತಾ ಬಾಕ್ಸರ್ ಗಳು ಆರೋಪ ಮಾಡಿದ್ದಾರೆ. ಜ್ಯೋತಿ ಗುಲಿಯಾ ಎಂಬ ಬಾಕ್ಸರ್, ತನ್ನ ತಾಯಿಗೆ ಹಸು ಒದ್ದಿದೆ. ಎಷ್ಟು ಆಹಾರ ಹಾಕಿದ್ರೂ ಒಂಚೂರು ಹಾಲು ಕೊಡುತ್ತಿಲ್ಲ ಅಂತಾ ಹೇಳಿದ್ದಾಳೆ.

ಲೋಕಲ್ ತಳಿಯ ಹಸುಗಳನ್ನು ಕ್ರೀಡಾಪಟುಗಳಿಗೆ ಕೊಡಲಾಗಿದೆ ಎಂಬ ಆರೋಪ ಕೂಡ ಕೇಳಿಬಂದಿದೆ. ಜ್ಯೋತಿ, ನೀತು ಘಂಗಾಸ್ ಹಾಗೂ ಸಾಕ್ಷಿ ಕುಮಾರ್ ಸರ್ಕಾರ ಕೊಟ್ಟಿದ್ದ ಹಸುಗಳನ್ನು ಈಗಾಗ್ಲೇ ವಾಪಸ್ ಮಾಡಿದ್ದಾರಂತೆ. ಈ ಮೂವರು ಚಾಂಪಿಯನ್ಷಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...