alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಳ್ಳಿ ಪದಕ ಗೆದ್ದ ದೀಪಾ ಮಲಿಕ್ ಗೆ 4 ಕೋಟಿ ರೂ.

sr-20

ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ದೀಪಾ ಮಲಿಕ್ ಗೆ ಹರಿಯಾಣ ಸರ್ಕಾರ 4 ಕೋಟಿ ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದೆ. ದೀಪಾ ಮಲಿಕ್ ಗೆ 4 ಕೋಟಿ ರೂ. ಗೌರವ ಧನ ನೀಡುವುದಾಗಿ ರಾಜ್ಯ ಕ್ರೀಡಾ ಸಚಿವ ಅನಿಲ್ ವಿಜ್ ತಿಳಿಸಿದ್ದಾರೆ.

ನಿನ್ನೆ ಭಾರತಕ್ಕೆ ಬಂದ ಕ್ರೀಡಾಪಟು ದೀಪಾ ಮಲಿಕ್ ಗೆ ಅದ್ಧೂರಿ ಸ್ವಾಗತ ದೊರೆಯಿತು. ದೆಹಲಿ ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು, ಅಭಿಮಾನಿಗಳು ಹಾಗೂ ರಾಜ್ಯ ಕ್ರೀಡಾ ಸಚಿವರು ಅದ್ಧೂರಿ ಸ್ವಾಗತ ಕೋರಿದ್ರು. ಈ ವೇಳೆ ಮಾತನಾಡಿದ ಅನಿಲ್, ಹರ್ಯಾಣಾದ ಆಟಗಾರರೊಬ್ಬರು ಪ್ಯಾರಾಲಿಂಪಿಕ್ಸ್ ನಲ್ಲಿ ಪಾಲ್ಗೊಂಡು ಪದಕ ಗೆದ್ದು ತಂದಿರುವುದು ರಾಜ್ಯಕ್ಕೆ ಹೆಮ್ಮೆಯ ವಿಷಯ. ರಾಜ್ಯ ಹಾಗೂ ದೇಶದ ಕೀರ್ತಿಯನ್ನು ಹೆಚ್ಚಿಸಿದ ದೀಪಾ ಮಲಿಕ್ ಗೆ ಸರ್ಕಾರಿ ಉದ್ಯೋಗ ನೀಡುವುದಾಗಿಯೂ ಘೋಷಣೆ ಮಾಡಿದ್ರು.

ಪ್ಯಾರಾಲಿಂಪಿಕ್ಸ್ ನ ಶಾಟ್ ಪುಟ್ ಎಫ್ 53 ವಿಭಾಗದಲ್ಲಿ ದೀಪಾ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಪ್ಯಾರಾಲಿಂಪಿಕ್ಸ್ ನಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...