alex Certify
ಕನ್ನಡ ದುನಿಯಾ       Mobile App
       

Kannada Duniya

ಪಂದ್ಯ ಸೋತರೇನಂತೆ? ಎಲ್ಲರ ಮನ ಗೆದ್ದಿದೆ ಪಾಂಡ್ಯಾ ಮಾಡಿದ ಕೆಲಸ…!

ಎಡ್ಜ್ ಬಾಸ್ಟನ್ ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ತ್ರಿಕೋನ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 31 ರನ್ ಗಳ ಅಂತರದಿಂದ ಪರಾಭವವನ್ನುನುಭವಿಸಿದೆ.

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿ ಶತಕ ಬಾರಿಸಿದರೂ ಗೆಲುವು ಇಂಗ್ಲೆಂಡ್ ತಂಡದ ಪಾಲಾಗಿದೆ.

ಇದರ ಮಧ್ಯೆ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಮಾಡಿರುವ ಕಾರ್ಯವೊಂದು ಎಲ್ಲರ ಮನಗೆದ್ದಿದೆ. ತನ್ನ ಸಹ ಆಟಗಾರರಾದ ಇಶಾಂತ್ ಶರ್ಮ ಹಾಗೂ ಕೆ.ಎಲ್. ರಾಹುಲ್ ಜೊತೆ ಡಿನ್ನರ್ ಗೆ ಹೋಗಿ ಬಂದಿದ್ದ ಹಾರ್ದಿಕ್ ಪಾಂಡ್ಯ ಕೊನೆಯದಾಗಿ ಕ್ಯಾಬ್ ನಿಂದ ಇಳಿದ ಬಳಿಕ ತಾವು ತಂಗಿದ್ದ ಹಯಾತ್ ರೀಜೆನ್ಸಿ ಹೋಟೆಲ್ ಸಿಬ್ಬಂದಿ ಬಳಿ ತೆರಳಿದ್ದಾರೆ.

ತಮಗಾಗಿ ಇರಿಸಲಾಗಿದ್ದ ಆಹಾರವನ್ನು ತಾವು ಮುಟ್ಟಿಲ್ಲ. ಇದನ್ನು ಯಾರಾದರೂ ಕೇಳಿಕೊಂಡು ಬಂದರೆ ಅವರಿಗೆ ನೀಡುವಂತೆ ಮನವಿ ಮಾಡಿದ್ದು, ಅವರ ಈ ಕಾರ್ಯ ಈಗ ಹೋಟೆಲ್ ಸಿಬ್ಬಂದಿ ಮೂಲಕ ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...