alex Certify
ಕನ್ನಡ ದುನಿಯಾ       Mobile App
       

Kannada Duniya

ಹಾರ್ದಿಕ್ ಹೊಸ ಹೇರ್ ಸ್ಟೈಲ್ ನೋಡಿ ಜೋಕರ್ ಎಂದ ಅಭಿಮಾನಿ

ಹಾರ್ದಿಕ್ ಪಾಂಡ್ಯ ಭಾರತ ಕ್ರಿಕೆಟ್ ತಂಡದ ಉದಯೋನ್ಮುಕ ತಾರೆ. ಅಭಿಮಾನಿಗಳು ಮೈದಾನದಲ್ಲೊಂದೇ ಅಲ್ಲ ಮೈದಾನದ ಹೊರಗೂ ಹಾರ್ದಿಕ್ ಜೀವನ ಶೈಲಿ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡ್ತಾರೆ.

ಹಾರ್ದಿಕ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಹೊಸ ಹೊಸ ಫೋಟೋಗಳನ್ನು ಸಾಮಾಜಿಕ ಜಾಲತಾಣಕ್ಕೆ ಹಾಕ್ತಿರುತ್ತಾರೆ. ಸದ್ಯ ಹೊಸ ಹೇರ್ ಸ್ಟೈಲ್ ನಲ್ಲಿ ಫೋಟೋವೊಂದನ್ನು ಪಾಂಡ್ಯ ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾರೆ. ಟ್ವೀಟರ್ ಹಾಗೂ ಇನ್ಸ್ಟ್ರಾಗ್ರಾಮ್ ನಲ್ಲಿ ಹಾರ್ದಿಕ್ ಹಾಕಿರುವ ಫೋಟೋಕ್ಕೆ ಭರ್ಜರಿ ಕಮೆಂಟ್ ಬರ್ತಿದೆ.

ಇನ್ಸ್ಟ್ರಾಗ್ರಾಮ್ ಫಾಲೋವರ್ ಒಬ್ಬ ಹಾರ್ದಿಕ್ ಪಾಂಡ್ಯ ಹೊಸ ಹೇರ್ ಸ್ಟೈಲ್ ನಲ್ಲಿ ಜೋಕರ್ ನಂತೆ ಕಾಣ್ತಾರೆ ಎಂದಿದ್ದಾರೆ. ಇನ್ನೊಬ್ಬರು ಕ್ರಿಕೆಟ್ ಬಗ್ಗೆ ಗಮನ ಕೊಡಿ ಎಂದು ಸಲಹೆ ನೀಡಿದ್ದಾರೆ.

ಹಾರ್ದಿಕ್ ಪಾಂಡ್ಯರನ್ನು ಭಾರತ ಕ್ರಿಕೆಟ್ ತಂಡದ ರಾಕ್ ಸ್ಟಾರ್ ಎಂದು ಕರೆಯಲಾಗುತ್ತದೆ. ರವೀಂದ್ರ ಜಡೇಜಾ ಈ ಹೆಸರು ನೀಡಿದ್ದಾರೆ. ಕೇವಲ 9ನೇ ತರಗತಿಯವರೆಗೆ ಮಾತ್ರ ಓದಿರುವ ಹಾರ್ದಿಕ್ ಈಗ ಕೋಟ್ಯಾಧಿಪತಿಯಾಗಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...