alex Certify
ಕನ್ನಡ ದುನಿಯಾ       Mobile App
       

Kannada Duniya

ಬಹಿರಂಗವಾಯ್ತು ಹಾರ್ದಿಕ್ ಪಾಂಡ್ಯ ಡೇಟಿಂಗ್ ಸ್ಟೋರಿ

lisa hard

ಬೆಂಗಳೂರಿನಲ್ಲಿ ನಡೆದ ಐಸಿಸಿ ವಿಶ್ವಕಪ್ ಟಿ-20 ಟೂರ್ನಿಯ ಪಂದ್ಯದಲ್ಲಿ, ಬಾಂಗ್ಲಾ ಎದುರು ಕೊನೆಯ ಓವರ್ ನಲ್ಲಿ ಮ್ಯಾಜಿಕ್ ಮಾಡಿದ, ಭಾರತದ ಬೌಲರ್ ಹಾರ್ದಿಕ್ ಪಾಂಡ್ಯ, ರಾತ್ರೋ ರಾತ್ರಿ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಪಾಂಡ್ಯ, ಮಾಡೆಲ್ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಕೋಲ್ಕತಾ ಮೂಲದ 22 ವರ್ಷದ ಮಾಡೆಲ್ ಲಿಸಾ ಶರ್ಮ, ಜೊತೆಗೆ ಕ್ರಿಕೆಟರ್ ಹಾರ್ದಿಕ್ ಪಾಂಡ್ಯ ಡೇಟಿಂಗ್ ನಲ್ಲಿದ್ದಾರೆ. ಲಿಸಾ, ಜೆಮ್ ಶೆಡ್ ಪುರದಲ್ಲಿ ನೆಲೆಸಿದ್ದು, ತಾವೇ ಈ ವಿಷಯವನ್ನು ಬಹಿರಂಗಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಹಾಗೂ ನಾನು ಉತ್ತಮ ಸ್ನೇಹಿತರಾಗಿದ್ದು, ಅವರೊಬ್ಬ ಉತ್ತಮ ವ್ಯಕ್ತಿಯಾಗಿದ್ದಾರೆ. ಅಪ್ಪಟ ಚಿನ್ನದಂತಹ ವ್ಯಕ್ತಿತ್ವ ಅವರದ್ದಾಗಿದ್ದು, ತಾಳ್ಮೆ ಮತ್ತು ಪರಿಪೂರ್ಣತೆಯನ್ನು ಹೊಂದಿದ್ದಾರೆ. ಡೇಟಿಂಗ್ ನಡೆಸಲು ಪಾಂಡ್ಯ ಉತ್ತಮ ಆಯ್ಕೆಯಾಗಿದ್ದಾರೆ ಎಂದು ಲಿಸಾ ಶರ್ಮ ಹೇಳಿದ್ದಾರೆ.

ಬಾಂಗ್ಲಾ ಎದುರಿನ ಕೊನೆಯ ಓವರ್ ನಲ್ಲಿ ಬೌಲಿಂಗ್ ಆರಂಭಿಸುವ ಮೊದಲು ಒತ್ತಡಕ್ಕೆ ಒಳಗಾಗಿದ್ದ ಪಾಂಡ್ಯ, ಧೋನಿ ಸಲಹೆಯಂತೆ ಬಿಂದಾಸ್ ಬೌಲಿಂಗ್ ಮಾಡಿದರು. ಅಂತಹ ಒತ್ತಡದಲ್ಲಿಯೂ ನಗುತ್ತ ಬೌಲಿಂಗ್ ಮಾಡಿದ್ದನ್ನು ಲಿಸಾ ಹೇಳಿಕೊಂಡು, ಹಾಗಾಗಿಯೇ ಪಾಂಡ್ಯ ವ್ಯಕ್ತಿತ್ವ ಇಷ್ಟವಾಗುತ್ತದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...