alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಯ್ತು ಹುಡುಗಿಯರ ನಡುವೆ ಇರುವ ಪಾಂಡ್ಯ ಫೋಟೋ

ಭಾರತ ಕ್ರಿಕೆಟ್ ತಂಡದ ಉದಯೋನ್ಮುಖ ಆಟಗಾರ ಹಾರ್ದಿಕ್ ಪಾಂಡ್ಯ ಮೈದಾನದಲ್ಲಿ ಮಿಂಚಿದಂತೆಯೇ ಮೈದಾನದ ಹೊರಗೂ ಸಖತ್ ಶೈನ್ ಆಗಿದ್ದಾರೆ.

ವಿಭಿನ್ನ ಹೇರ್ ಸ್ಟೈಲ್, ಸಿಕ್ಸ್ ಪ್ಯಾಕ್ ಮೂಲಕ ಅವರು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದಾರೆ. ಸದ್ಯ ಶ್ರೀಲಂಕಾ ವಿರುದ್ಧದದ ಟೆಸ್ಟ್ ಸರಣಿಯಿಂದ ವಿಶ್ರಾಂತಿ ಪಡೆದ ಅವರು, ಮ್ಯಾಕ್ಸಿಮ್ ಇಂಡಿಯಾ ನಿಯತಕಾಲಿಕದ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದಾರೆ.

ಅಲ್ಲಿನ ಕೆಲವು ಚಿತ್ರಗಳನ್ನು ಜಾಲತಾಣದಲ್ಲಿ ಹಾಕಿದ್ದು, ಅವು ವೈರಲ್ ಆಗಿದೆ. ಅದರಲ್ಲಿ ಪಾಂಡ್ಯ ಸಿಕ್ಸ್ ಪ್ಯಾಕ್ ನಲ್ಲಿ ಕಾಣಿಸಿಕೊಂಡಿರುವ ಫೋಟೋವಂತೂ ಹೆಚ್ಚಿನ ಸಂಖ್ಯೆಯ ಟ್ವಿಟಾರ್ಥಿಗಳ ಗಮನಸೆಳೆದಿದೆ.

ಫೋಟೋ ಶಾಪ್ ನಲ್ಲಿ ಟ್ವಿಟಾರ್ಥಿಗಳು ರಚಿಸಿದ ಫೋಟೋದಲ್ಲಿ ಯುವತಿಯರ ಮಧ್ಯೆ ಸಿಕ್ಸ್ ಪ್ಯಾಕ್ ನಲ್ಲಿ ಪಾಂಡ್ಯ ಕಾಣಿಸಿಕೊಂಡಿದ್ದು, ಈ ಫೋಟೋ ಕೂಡ ವೈರಲ್ ಆಗಿದೆ.

ಕಳೆದ ಒಂದೂವರೆ ವರ್ಷದಲ್ಲಿ 25 ಟಿ -20, 30 ಏಕದಿನ ಮತ್ತು 3 ಟೆಸ್ಟ್ ಪಂದ್ಯಗಳನ್ನಾಡಿರುವ ಪಾಂಡ್ಯ, ವೃತ್ತಿ ಜೀವನದಲ್ಲಿ ಅಲ್ಪಾವಧಿಯಲ್ಲಿ ಕ್ರಿಕೆಟ್ ಆಡಿದ್ದೇನೆ. ಆಲ್ ರೌಂಡರ್ ಆಗಿರುವ ಕಾರಣ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಮಾಡುವುದು ಮುಖ್ಯವಾಗಿದೆ ಎಂದು ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...