alex Certify
ಕನ್ನಡ ದುನಿಯಾ       Mobile App
       

Kannada Duniya

“ಕ್ರೊಯೇಷಿಯಾ ವಿಶ್ವಕಪ್ ಆಡಿದ್ರೆ ಭಾರತ ಹಿಂದೂ-ಮುಸ್ಲಿಂ ಆಟವಾಡ್ತಿದೆ’’

ಕ್ರಿಕೆಟರ್ ಹರ್ಭಜನ್ ಸಿಂಗ್ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನು ಭಾರತದ ರಾಜಕೀಯಕ್ಕೆ ಹೋಲಿಸಿ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. ಕ್ರೊಯೇಷಿಯಾ ಫೈನಲ್ ಬಗ್ಗೆ ಹರ್ಭಜನ್ ಟ್ವಿಟ್ ಮಾಡಿದ್ದಾರೆ. ಇದು ಚರ್ಚೆಗೆ ಕಾರಣವಾಗಿದೆ.

ಕ್ರೊಯೇಷಿಯಾ ಫಿಫಾ ವಿಶ್ವಕಪ್ ನಲ್ಲಿ ಫೈನಲ್ ಪಂದ್ಯವನ್ನಾಡಿದೆ. ಆದ್ರೆ ಭಾರತದ 135 ಕೋಟಿ ಜನರು ಹಿಂದೂ-ಮುಸ್ಲಿಂ ಆಟವಾಡ್ತಿದ್ದಾರೆ ಎಂದಿದ್ದಾರೆ. ಫೈನಲ್ ಪಂದ್ಯಕ್ಕೂ ಮುನ್ನ ಹರ್ಭಜನ್ ಸಿಂಗ್ ಟ್ವಿಟ್ ಮಾಡಿದ್ದರು. 50 ಲಕ್ಷ ಜನಸಂಖ್ಯೆಯಿರುವ ಸಣ್ಣ ದೇಶ ಫಿಫಾ ವಿಶ್ವಕಪ್ ಫೈನಲ್ ಪಂದ್ಯವನ್ನಾಡುತ್ತಿದೆ. ಆದ್ರೆ 135 ಕೋಟಿ ಜನಸಂಖ್ಯೆಯಿರುವ ಭಾರತೀಯರು ಮಾತ್ರ ಹಿಂದೂ-ಮುಸ್ಲಿಂ ಆಟವಾಡ್ತಿದ್ದೇವೆ. ನಮ್ಮ ಆಲೋಚನೆ ಬದಲಾದ್ರೆ ದೇಶ ಬದಲಾಗುತ್ತದೆ ಎಂದು ಹರ್ಭಜನ್ ಟ್ವಿಟ್ ಮಾಡಿದ್ದಾರೆ.

ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಕ್ರೊಯೇಷಿಯಾವನ್ನು ಮಣಿಸಿ ಫ್ರಾನ್ಸ್ ಚಾಂಪಿಯನ್ ಆಗಿದೆ. 20 ವರ್ಷಗಳ ನಂತ್ರ ಫ್ರಾನ್ಸ್ ವಿಶ್ವಕಪ್ ಎತ್ತಿ ಹಿಡಿದಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಫಾನ್ಸ್ ಗೆ ಶುಭಕೋರಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...