alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಣ್ಣು ಮಗುವಿನ ತಂದೆಯಾದ ಬಜ್ಜಿ

bhajji

ಭಾರತೀಯ ಕ್ರಿಕೆಟರ್ ಹರ್ಭಜನ್ ಸಿಂಗ್ ಮನೆಯಲ್ಲಿ ಹಬ್ಬದ ವಾತಾವರಣ. ಬಜ್ಜಿ ಹಾಗೂ ಗೀತಾ ಬಸ್ರಾ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಹರ್ಭಜನ್ ಸಿಂಗ್ ಪತ್ನಿ ಗೀತಾ ಬಸ್ರಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಗೀತಾ ಇದೇ 27 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ಖುಷಿ ಸುದ್ದಿಯನ್ನು ಹರ್ಭಜನ್ ಸಿಂಗ್ ತಾಯಿ ಅವತಾರ್ ಕೌರ್  ವೆಬ್ಸೈಟೊಂದರಲ್ಲಿ ಹಂಚಿಕೊಂಡಿದ್ದಾರೆ. ಗೀತಾ ಬಸ್ರಾ ತಾಯಿ ಮನೆ ಲಂಡನ್ ನಲ್ಲಿದೆ. ಅಲ್ಲಿಯೇ ಗೀತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ.

ಗೀತಾ ಹಾಗೂ ಹರ್ಭಜನ್ ಸಿಂಗ್ ಮದುವೆ ಹಿಂದಿನ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ನಡೆದಿತ್ತು. ಗೀತಾ ಲಂಡನ್ ನಲ್ಲಿರುವ ತಾಯಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಸದ್ಯ ರೆಸ್ಟ್ ನಲ್ಲಿರುವ ಹರ್ಭಜನ್ ಸಿಂಗ್ ಕೂಡ ಲಂಡನ್ ನಲ್ಲಿಯೇ ಪತ್ನಿ ಜೊತೆ ಹೊಸ ಅತಿಥಿ ಆಗಮನಕ್ಕೆ ಕಾಯುತ್ತಿದ್ದರು. ಕೆಲ ದಿನಗಳ ಹಿಂದಷ್ಟೇ ಹರ್ಭಜನ್ ತನ್ನ ಹೆಂಡತಿ ಗೀತಾ ಬಸ್ರಾ ಬೇಬಿ ಬಂಪ್ ಫೋಟೊವನ್ನು ಸಾಮಾಜಿಕ ಜಾಲತಾಣಗಳಿಗೆ ಹರಿಬಿಟ್ಟಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...