alex Certify
ಕನ್ನಡ ದುನಿಯಾ       Mobile App
       

Kannada Duniya

ನಿಬ್ಬೆರಗಾಗಿಸುತ್ತೆ ಪುಟಾಣಿ ಈಜುಪಟುಗಳ ಈ ಸಾಹಸ

ಇಬ್ಬರು ಪುಟ್ಟ ಮಕ್ಕಳು ಹೊಸ ಇತಿಹಾಸವನ್ನೇ ಸೃಷ್ಟಿಸಿದ್ದಾನೆ. ಕೈಗಳನ್ನು ಕಟ್ಟಿಕೊಂಡು ಪೆರಿಯಾರ್ ನದಿಯಲ್ಲಿ ಈಜಿದ್ದಾರೆ. 8 ವರ್ಷದ ಶಿಫಾ ಮತ್ತವಳ ಸಹೋದರ 5 ವರ್ಷದ ಹಿಶಮ್ ಈ ಸಾಧನೆ ಮಾಡಿದ ಸಾಹಸಿಗಳು.

ಅಳುವಾ ಮಣಪ್ಪುರಂ ಬಳಿ ಇಬ್ಬರೂ ಕೈಗಳನ್ನು ಕಟ್ಟಿಕೊಂಡು ಪೆರಿಯಾರ್ ನದಿಯಲ್ಲಿ ಈಜಿದ್ದಾರೆ. ಬೆಳಗ್ಗೆ 9 ಗಂಟೆಗೆ ಆಶ್ರಮನ್ ಕಡವು ಎಂಬಲ್ಲಿಂದ ಈ ಪುಟಾಣಿಗಳು ಈಜಲು ಆರಂಭಿಸಿದ್ರು. ಕೇವಲ 25 ನಿಮಿಷಗಳಲ್ಲಿ ಅಳುವಾ ಮಣಪ್ಪುರಂಗೆ ತಲುಪಿದ್ದಾರೆ.

ವಲಸ್ಸೆರಿ ಸ್ವಿಮ್ಮಿಂಗ್ ಕ್ಲಬ್ ನಲ್ಲಿ ಇಬ್ಬರೂ ತರಬೇತಿ ಪಡೆಯುತ್ತಿದ್ದಾರೆ. ತಂದೆಯೇ ಅವರ ಮೊದಲ ಗುರು. ಈಜು ಕಲಿಕೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಈ ಸಾಹಸ ಮಾಡಿದ್ದಾರೆ. ಪ್ರತಿಯೊಬ್ಬರೂ ಈಜು ಕಲಿತರೆ ನದಿಯಲ್ಲಿ ಸಂಭವಿಸುವ ದುರಂತಗಳಿಂದ ಪಾರಾಗಬಹುದು ಅನ್ನೋದು ಅವರ ಅಭಿಪ್ರಾಯ.

ಸ್ಕೂಬಾ ಡೈವರ್ ಗಳ ತಂಡ ಕೂಡ ಪುಟಾಣಿಗಳಿಗೆ ಸಾಥ್ ಕೊಟ್ಟಿತ್ತು. ತರಬೇತುದಾರ ಸಾಜಿ ಹಾಗು ತಂದೆ ಶಹವಾಜ್ ಕೂಡ ಜೊತೆಯಲ್ಲೇ ಈಜಿದ್ದಾರೆ. ಲೈಫ್ ಜಾಕೆಟ್, ಟ್ಯೂಬ್ ಸೇರಿದಂತೆ ಸುರಕ್ಷತಾ ಸಾಮಗ್ರಿಗಳನ್ನು ಬೋಟ್ ನಲ್ಲಿ ಕೊಂಡೊಯ್ಯಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...