alex Certify
ಕನ್ನಡ ದುನಿಯಾ       Mobile App
       

Kannada Duniya

ತರಬೇತಿ ಹೆಸರಿನಲ್ಲಿ ಕೆಟ್ಟ ಕೆಲಸ ಮಾಡ್ತಿದ್ದ ಕೋಚ್

tx-16

ರಾಜಸ್ತಾನದ ಕೋಟಾದಲ್ಲಿ ಹ್ಯಾಂಡ್ಬಾಲ್ ತರಬೇತಿ ನೀಡುವ ಕೇಂದ್ರದ ಕೋಚ್ ವಿರುದ್ಧ ಅತ್ಯಾಚಾರದ ದೂರು ದಾಖಲಾಗಿದೆ. 16 ವರ್ಷದ ಹ್ಯಾಂಡ್ಬಾಲ್ ಆಟಗಾರ್ತಿ ತರಬೇತಿ ಕೇಂದ್ರದ ತರಬೇತಿದಾರನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದಾಳೆ.

ಅಬ್ದುಲ್ ಹನೀಫ್ ಹೆಸರಿನ ತರಬೇತಿದಾರನೊಬ್ಬ ಕಳೆದ ಎರಡು ತಿಂಗಳಿಂದ ಅತ್ಯಾಚಾರವೆಸಗುತ್ತಿದ್ದಾನೆಂದು ಆಕೆ ದೂರಿದ್ದಾಳೆ. ಹ್ಯಾಂಡ್ಬಾಲ್ ಪಂದ್ಯಗಳಿಗಾಗಿ ಬೇರೆ ಬೇರೆ ಊರುಗಳಿಗೆ ಆಕೆಯನ್ನು ಕರೆದುಕೊಂಡು ಹೋಗ್ತಾ ಇದ್ದ. ಅಲ್ಲಿನ ಹೊಟೇಲ್ ಗಳಲ್ಲಿ ಅತ್ಯಾಚಾರವೆಸಗುತ್ತಿದ್ದ ಎಂದು ಆಕೆ ದೂರಿನಲ್ಲಿ ಹೇಳಿದ್ದಾಳೆ.

ಎರಡು ತಿಂಗಳಲ್ಲಿ ಸುಮಾರು 7-8 ಬಾರಿ ಅಬ್ದುಲ್ ಅತ್ಯಾಚಾರವೆಸಗಿದ್ದಾನೆಂದು ಆಟಗಾರ್ತಿ ದೂರಿನಲ್ಲಿ ಹೇಳಿದ್ದಾಳೆ. ಡಿಸೆಂಬರ್ 17ರಂದು ಹೊಟೇಲ್ ನಲ್ಲಿ ಅಸಭ್ಯವಾಗಿ ನಡೆದುಕೊಂಡಿದ್ದನಂತೆ ಅಬ್ದುಲ್. ಆರೋಪಿ ವಿರುದ್ಧ ಪೋಸ್ಕೋ ಹಾಗೂ ಎಸ್ಸಿ –ಎಸ್ಟಿ ಕಾನೂನಿನಡಿಯಲ್ಲಿ ದೂರು ದಾಖಲಿಸಲಾಗಿದೆ. ಆಟಗಾರ್ತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...