alex Certify
ಕನ್ನಡ ದುನಿಯಾ       Mobile App
       

Kannada Duniya

ಇಸ್ಲಾಂ ಧರ್ಮದ ಬಗ್ಗೆ ಅಪಹಾಸ್ಯ ಮಾಡಿದ ಅಥ್ಲೆಟ್

louis-1

ಒಲಂಪಿಕ್ಸ್ ಪದಕ ವಿಜೇತ ಲೂಯಿಸ್ ಸ್ಮಿತ್ ವಿರುದ್ಧ ಇಸ್ಲಾಂ ಧರ್ಮದ ಬಗ್ಗೆ ಅಪಹಾಸ್ಯ ಮಾಡಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬ್ರಿಟನ್ ಜಿಮ್ನಾಸ್ಟಿಕ್ಸ್, ಸ್ಮಿತ್ ವಿರುದ್ಧ ಶಿಸ್ತು ಕ್ರಮ ಕೈಗೊಂಡಿದೆ. ಎರಡು ತಿಂಗಳ ಕಾಲ ನಿಷೇಧ ಹೇರಿದೆ.

ಕಳೆದ ತಿಂಗಳು ಹೊರಬಂದಿದ್ದ ವಿಡಿಯೋವೊಂದರಲ್ಲಿ 27 ವರ್ಷದ ಸ್ಮಿತ್, ಇಸ್ಮಾಂ ಧರ್ಮೀಯರಿಗೆ ನೋವಾಗುವಂತೆ ನಡೆದುಕೊಂಡಿದ್ದರು. ಮೊದಲು ನಮಾಜ್ ಮಾಡುವ ಸ್ಮಿತ್ ನಂತ್ರ ಅಲ್ಲಾ – ಹೂ-ಅಕ್ಬರ್ ಅಂತಾ ಜೋರಾಗಿ ಕೂಗಿದ್ದರು. ಸಹೋದ್ಯೋಗಿ ಲ್ಯೂಕ್ ಕಾರ್ಸನ್, ಸ್ಮಿತ್ ಹಿಂದೆ ನಿಂತು ತಮಾಷೆ ಮಾಡ್ತಿದ್ದರು.

ಈ ವಿಡಿಯೋ ವೈರಲ್ ಆದ ನಂತ್ರ ಸ್ಮಿತ್ ಈ ಬಗ್ಗೆ ಕ್ಷಮೆ ಕೂಡ ಕೇಳಿದ್ದರು. ಸ್ಮಿತ್ ತಪ್ಪೊಪ್ಪಿಕೊಂಡಿದ್ದು, ಎರಡು ತಿಂಗಳು ನಿಷೇಧ ಹೇರುವುದಾಗಿ ಬ್ರಿಟನ್ ಜಿಮ್ನಾಸ್ಟಿಕ್ ಸ್ಪಷ್ಟಪಡಿಸಿದೆ. ಈ ವರ್ಷ ರಿಯೋದಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಜಿಮ್ನಾಸ್ಟಿಕ್ ಪಟು ಸ್ಮಿತ್ ಬೆಳ್ಳಿ ಪದಕ ಗೆದ್ದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...