alex Certify
ಕನ್ನಡ ದುನಿಯಾ       Mobile App
       

Kannada Duniya

ಸಚಿನ್ ನೀಡಿದ್ದ ಬಿಎಂಡಬ್ಯ್ಲೂಕಾರ್ ವಾಪಸ್ ಮಾಡ್ತಾರೆ ದೀಪಾ

dipa-bmw

ರಿಯೋ ಒಲಂಪಿಕ್ಸ್ ನಲ್ಲಿ ಉತ್ತಮ ಪ್ರದರ್ಶನ ತೋರಿದ ತ್ರಿಪುರಾದ ಜಿಮ್ನಾಸ್ಟರ್ ದೀಪಾ ಕರ್ಮಕಾರ್ ತಮಗೆ ಉಡುಗೊರೆಯಾಗಿ ನೀಡಿದ್ದ ದುಬಾರಿ ಕಾರನ್ನು ವಾಪಸ್ ನೀಡಲು ಮುಂದಾಗಿದ್ದಾರೆ. ಒಲಂಪಿಕ್ಸ್ ನಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದ ದೀಪಾರಿಗೆ ಹೈದ್ರಾಬಾದ್ ಬ್ಯಾಡ್ಮಿಂಟನ್ ಅಸೋಸಿಯೇಶನ್ ಅಧ್ಯಕ್ಷ ಚಾಂಮುಡೇಶ್ವರನಾಥ್ ಬಿಎಂಡಬ್ಲ್ಯೂ ಕಾರನ್ನು ಉಡುಗೊರೆಯಾಗಿ ನೀಡಿದ್ದರು.

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸೆಪ್ಟೆಂಬರ್ ನಲ್ಲಿ ಕಾರಿನ ಕೀಯನ್ನು ದೀಪಾರಿಗೆ ಹಸ್ತಾಂತರಿಸಿದ್ದರು. ಕಾರು ಸಾಕಷ್ಟು ದುಬಾರಿಯಾಗಿದ್ದು, ನಿರ್ವಹಣೆ ಸುಲಭವಲ್ಲ. ಹಾಗಾಗಿ ದೀಪಾ ಕುಟುಂಬದವರ ಜೊತೆ ಮಾತುಕತೆ ನಡೆಸಿ ಕಾರನ್ನು ವಾಪಸ್ ನೀಡುವ ನಿರ್ಧಾರಕ್ಕೆ ಬಂದಿದ್ದೇವೆಂದು ದೀಪಾ ತರಬೇತುದಾರ ಬಿಶ್ವೇಶ್ವರ್ ನಂದಿ ಹೇಳಿದ್ದಾರೆ.

ದೀಪಾ ಮನೆ ಮುಂದೆ ಕಾರು ನಿಲ್ಲಿಸಲು ಜಾಗವಿಲ್ಲ. ರಸ್ತೆ ಮೇಲೆ ದುಬಾರಿ ಕಾರನ್ನು ನಿಲ್ಲಿಸಬೇಕು. ಜೊತೆಗೆ ಮನೆಯ ಬಳಿ ಯಾವುದೇ ಸರ್ವೀಸ್ ಸೆಂಟರ್ ಇಲ್ಲ. ಹಾಗಾಗಿ ಮೆಂಟೇನನ್ಸ್ ಮತ್ತಷ್ಟು ಕಷ್ಟವಾಗಲಿದೆ ಎಂದು ನಂದಿ ಹೇಳಿದ್ದಾರೆ. ಪ್ರಾಯೋಜಕರು ಕಾರಿನ ಬದಲು ಹಣ ನೀಡಲು ಒಪ್ಪಿಕೊಂಡಿದ್ದಾರೆ. ಈ ಹಣದಿಂದ ಸಣ್ಣ ಕಾರ್ ಖರೀದಿ ಮಾಡುವುದಾಗಿ ನಂದಿ ಹೇಳಿದ್ದಾರೆ. ಆದ್ರೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ದೀಪಾ ತಂದೆ ಹೇಳಿದ್ದಾರೆ.

ಸದ್ಯ ದೀಪಾ ಮನೆಯಲ್ಲಿ ಯಾವುದೇ ಕಾರ್ ಇಲ್ಲ. ಮನೆಯಲ್ಲಿ ಯಾರಿಗೂ ಕಾರು ಚಾಲನೆ ಬರುವುದಿಲ್ಲ. ಬಿಎಂಡಬ್ಲ್ಯೂ ಕಾರ್ ನೀಡುವುದಕ್ಕೂ ಮೊದಲು ಈ ಬಗ್ಗೆ ಮಾತನಾಡಿದ್ದ ದೀಪಾ, ಕಾರ್ ಬಂದ ಮೇಲೆ ನಾನು ಹಾಗೂ ತಂದೆ ಡ್ರೈವಿಂಗ್ ಸ್ಕೂಲ್ ಗೆ ಹೋಗ್ತೇವೆ ಎಂದಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...