alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಟಿಂಗ್ ವೈಫಲ್ಯದಿಂದ ಮತ್ತೆ ಸೋತ ಆರ್.ಸಿ.ಬಿ.

vira-gu-lio

ಬೆಂಗಳೂರು: ಬ್ಯಾಟಿಂಗ್ ವೈಫಲ್ಯಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತೆ ಬೆಲೆ ತೆತ್ತಿದ್ದು, ಪ್ಲೇ ಆಫ್ ಕನಸಿಗೆ ಕಲ್ಲು ಬಿದ್ದಂತಾಗಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್.ಸಿ.ಬಿ. ಗುಜರಾತ್ ಲಯನ್ಸ್ ವಿರುದ್ಧ 7 ವಿಕೆಟ್ ಗಳ ಸೋಲು ಕಂಡಿದೆ.

ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಆರ್.ಸಿ.ಬಿ. ನಿಗದಿತ 20 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 134 ರನ್ ಗಳಿಸಿದೆ. ಕೇದಾರ್ ಜಾಧವ್ 31, ವಿರಾಟ್ ಕೊಹ್ಲಿ 10, ಕ್ರಿಸ್ ಗೇಲ್ 8, ಎಬಿ ಡಿ’ವಿಲಿಯರ್ಸ್ 5, ಪವನ್ ನೇಗಿ 32 ಅನಿಕೇತ್ ಚೌಧರಿ ಅಜೇಯ 15 ರನ್ ಗಳಿಸಿದ್ದಾರೆ.

ಗುಜರಾತ್ ಪರವಾಗಿ ಆ್ಯಂಡ್ರ್ಯೂ ಟೈ 3 ವಿಕೆಟ್ ಪಡೆದು ಗಮನ ಸೆಳೆದರು. 135 ರನ್ ಗೆಲುವಿನ ಗುರಿ ಪಡೆದ ಗುಜರಾತ್ ಪರವಾಗಿ ಆ್ಯರೊನ್ ಫಿಂಚ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. 34 ಎಸೆತಗಳಲ್ಲಿ 72 ರನ್ ಗಳಿಸಿದ್ದಾರೆ.

ಇಶಾನ್ ಕಿಶನ್ 16, ಸುರೇಶ್ ರೈನಾ ಅಜೇಯ 34 ರನ್ ಗಳಿಸಿದ್ದು, 13.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡ ಗುಜರಾತ್ 135 ರನ್ ಗಳಿಸಿ ಗೆಲುವು ಕಂಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...