alex Certify
ಕನ್ನಡ ದುನಿಯಾ       Mobile App
       

Kannada Duniya

ವಿರುಷ್ಕಾ ದಂಪತಿಗಳಿಗೆ ಖುಷಿ ಸುದ್ದಿ ನೀಡಿದ ಬಿಸಿಸಿಐ

ಕಳೆದ ವರ್ಷ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ, ತಮ್ಮ ತಮ್ಮ ವೃತ್ತಿ ಜೀವನದ ಕಾರಣಕ್ಕಾಗಿ ಕೆಲ ದಿನಗಳನ್ನಷ್ಟೇ ಒಟ್ಟಿಗೆ ಕಳೆದಿದ್ದಾರೆ.

ವಿರಾಟ್ ಕೊಹ್ಲಿ ಈಗ ಇಂಗ್ಲೆಂಡ್ ಪ್ರವಾಸದಲ್ಲಿದ್ದು, ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲಿದ್ದಾರೆ. ಏಕದಿನ ಹಾಗೂ ಟಿ-20 ಪಂದ್ಯದ ಸಂದರ್ಭದಲ್ಲಿ ಅಲ್ಲಿಗೆ ತೆರಳಿದ್ದ ಅನುಷ್ಕಾ ಶರ್ಮಾ ಕೆಲ ಸಮಯ ಪತಿಯೊಂದಿಗಿದ್ದರು.

ಟೆಸ್ಟ್ ಪಂದ್ಯಗಳ ಸರಣಿ ಸುದೀರ್ಘ ಕಾಲಾವಧಿಯದ್ದಾಗಿರುವುದರಿಂದ ಬಿಸಿಸಿಐ ತನ್ನ ನಿಯಮಗಳಲ್ಲಿ ಬದಲಾವಣೆ ತಂದಿದ್ದು, ಆಟಗಾರರು 45 ದಿನಗಳ ಅವಧಿಯಲ್ಲಿ ತಮ್ಮ ಪತ್ನಿ ಅಥವಾ ಗರ್ಲ್ ಫ್ರೆಂಡ್ ಜೊತೆ 14 ದಿನಗಳನ್ನು ಕಳೆಯಲು ಅವಕಾಶ ಕಲ್ಪಿಸಿದೆ. ಇದರಿಂದಾಗಿ ಟೆಸ್ಟ್ ಪಂದ್ಯದ ವೇಳೆ ಸ್ಟ್ಯಾಂಡ್ ನಲ್ಲಿ ಅನುಷ್ಕಾ ಶರ್ಮಾರನ್ನು ನೋಡುವ ಅವಕಾಶ ಅಭಿಮಾನಿಗಳಿಗೆ ಲಭ್ಯವಾಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...