alex Certify
ಕನ್ನಡ ದುನಿಯಾ       Mobile App
       

Kannada Duniya

ಲಾರ್ಡ್ಸ್ ಮೈದಾನದ ಹೊರಗೆ ರೇಡಿಯೋ ಮಾರಿದ ತೆಂಡೂಲ್ಕರ್ ಪುತ್ರ

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್ ಒಮ್ಮೆ ವಿಕೆಟ್ ಪಡೆದು ಸುದ್ದಿಯಲ್ಲಿದ್ರೆ, ಮತ್ತೊಮ್ಮೆ ಗ್ರೌಂಡ್ ಸಿಬ್ಬಂದಿಗೆ ಸಹಾಯ ಮಾಡಿ ಸುದ್ದಿಯಾಗ್ತಾರೆ. ಜೊತೆಗೆ ಇಂಗ್ಲೆಂಡ್ ಮಹಿಳಾ ತಂಡದ ಆಟಗಾರ್ತಿ ಡೇನಿಯಲ್ ವಾಟ್ ಜೊತೆ ಫೋಟೋ ತೆಗೆಸಿಕೊಂಡು ಚರ್ಚೆಯಲ್ಲಿದ್ದಾರೆ. ಆದ್ರೆ, ಶನಿವಾರ ಅರ್ಜುನ್ ಲಾರ್ಡ್ಸ್ ಅಂಗಳದ ಹೊರಗೆ ರೇಡಿಯೋ ಮಾರುತ್ತಾ ಎಲ್ಲರ ಗಮನ ಸೆಳೆದಿದ್ದಾರೆ.

ಕೊರಳಲ್ಲಿ ಪಿಂಕ್ ಬಣ್ಣದ ರೇಡಿಯೋ ಮಾರಾಟದ ಸಾಧನವನ್ನು ಹಿಡಿದು ಮಾರಾಟ ಮಾಡಿದ್ದಾರೆ. ಅಲ್ಲಿಯೇ ಇದ್ದ ಟರ್ಬನೇಟರ್ ಹರಭಜನ್ ಸಿಂಗ್ ಅರ್ಜುನ್ ರ ಬಳಿ ಹೋಗಿ ಒಂದು ಸೆಲ್ಫಿ ಪಡೆದು, ಸಾಮಾಜಿಕ ತಾಣದಲ್ಲಿ ಹಾಕಿದ್ದಾರೆ. ಅಷ್ಟೇ ಅಲ್ಲ ತಮಾಷೆಗೆ ಇಲ್ಲಿ ನೋಡಿ ಯಾರು ರೇಡಿಯೋ ಮಾರಾಟ ಮಾಡುತ್ತಿದ್ದಾರೆ. ಈಗಾಗಲೇ 50 ರೇಡಿಯೋಗಳು ಮಾರಾಟವಾಗಿವೆ ಎಂದು ಬರೆದಿದ್ದಾರೆ.

ಡಿಜಿಟಲ್ ರೇಡಿಯೋ ಕ್ರಿಕೆಟ್ ಪ್ರೇಮಿಗಳ ಅಚ್ಚುಮೆಚ್ಚಿನ ಆಲಿಸುವ ಸಾಧನ. ಪಂದ್ಯದ ನೇರ ಪ್ರಸಾರದ ವೀಕ್ಷಕ ವಿವರಣೆ ಈ ರೇಡಿಯೋದಲ್ಲಿ ಕೇಳಬಹುದು. ಅಲ್ಲದೆ ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ, (ಕೆಲವು ಮೀಟರ್ ಮಾತ್ರ) ಪಂದ್ಯದ ಲೈವ್ ಡಿಟೇಲ್ಸ್ ಅಭಿಮಾನಿಗಳಿಗೆ ನೀಡುವ ಸಾಧನ. ಇತ್ತೀಚೆಗೆ ಲಾರ್ಡ್ಸ್ ಮೈದಾನದಲ್ಲಿದ್ದ ನೀರನ್ನು ಸ್ವಚ್ಛಗೊಳಿಸಲು ಸಿಬ್ಬಂದಿಗಳಿಗೆ ಸಹಾಯ ಮಾಡಿ ಅರ್ಜುನ್ ಸುದ್ದಿಗೆ ಗ್ರಾಸವಾಗಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...