alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಡ್ಗಿಚ್ಚಿನ ನಡುವೆಯೇ ಗಾಲ್ಫ್ ಆಡಿದ ಸಾಹಸಿಗಳು….

ಆಟದ ಬಗ್ಗೆ ಬದ್ಧತೆ ಹೇಗಿರಬೇಕು ಅನ್ನೋದಕ್ಕೆ ಅಮೆರಿಕದ ಗಾಲ್ಫರ್ ಗಳು ಬೆಸ್ಟ್ ಎಕ್ಸಾಂಪಲ್. ಕಾಡ್ಗಿಚ್ಚಿನ ನಡುವೆಯೂ ಅವರು ಗಾಲ್ಫ್ ಆಡಿದ್ದಾರೆ. ಅಮೆರಿಕದ ಒರೆಗಾನ್ ನಲ್ಲಿರೋ ಬೀಕಾನ್ ರಾಕ್ ಗಾಲ್ಫ್ ಕೋರ್ಸ್ ನಲ್ಲಿ ನಡೆದ ಘಟನೆ ಇದು.

ಗಾಲ್ಫ್ ಮೈದಾನದ ಹಿಂಭಾಗದಲ್ಲಿ ಕಾಡ್ಗಿಚ್ಚು ಹಬ್ಬಿತ್ತು. ಮರಗಿಡಗಳೆಲ್ಲ ಧಗಧಗನೆ ಹೊತ್ತಿ ಉರಿಯುತ್ತಿದ್ವು. ಯಾವ ಕ್ಷಣದಲ್ಲಾದ್ರೂ ಬೆಂಕಿ ಗಾಲ್ಫ್ ಮೈದಾನದ ವರೆಗೂ ಆವರಿಸಿಕೊಳ್ಳೋ ಸಾಧ್ಯತೆ ಇತ್ತು. ಆದ್ರೂ ಆಟಗಾರರು ಮಾತ್ರ ವಿಚಲಿತರಾಗಿಲ್ಲ.

ಕಾಡ್ಗಿಚ್ಚಿನ ನಡುವೆಯೇ ಆಟ ಮುಂದುವರಿಸಿದ್ದಾರೆ. ಈ ಫೋಟೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ಈ ಫೋಟೋಗೆ 2.2 ಲಕ್ಷ ಲೈಕ್ಸ್ ಬಂದಿದ್ದು, ಲಕ್ಷಕ್ಕೂ ಹೆಚ್ಚು ಜನರು ರಿಟ್ವೀಟ್ ಮಾಡಿದ್ದಾರೆ. ಕೆಲವರು ಫೋಟೋಶಾಪ್ ಮಾಡಿರಬಹುದು ಅನ್ನೋ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ.

ಆದ್ರೆ ಇದು ರಿಯಲ್ ಫೋಟೋ. ಕ್ರಿಸ್ಟಿ ಮೆಕ್ ಕ್ಲೂಯೆರ್ ಎಂಬ ಛಾಯಾಗ್ರಾಹಕಿ ಇದನ್ನು ಸೆರೆಹಿಡಿದಿದ್ದಾಳೆ. ಸ್ಕೈ ಡೈವಿಂಗ್ ಗೆ ಹೋಗಿದ್ದಾಗ ಈ ದೃಶ್ಯ ಅವಳ ಕಣ್ಣಿಗೆ ಬಿದ್ದಿದೆ. ಈ ಕಾಡ್ಗಿಚ್ಚು ಸುಮಾರು 33,000 ಎಕರೆ ಪ್ರದೇಶಕ್ಕೆ ಹಬ್ಬಿತ್ತು.

View from the Clubhouse. Viewing the magnitude of the fire and thinking of how many people will be affected and for a long time. So thankful no lives lost.

Nai-post ni Beacon Rock Golf Course noong Miyerkules, Setyembre 6, 2017

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...