alex Certify
ಕನ್ನಡ ದುನಿಯಾ       Mobile App
       

Kannada Duniya

‘ಚಿನ್ನ’ದ ಹುಡುಗಿಗೆ ಹಣಕಾಸಿನ ಸಮಸ್ಯೆ…!

ಏಷ್ಯನ್ ಗೇಮ್ಸ್ ನ 400 ಮೀಟರ್ ರಿಲೇಯಲ್ಲಿ ದೇಶಕ್ಕೆ ಚಿನ್ನದ ಪದಕ ಗೆದ್ದುಕೊಟ್ಟ ಗೋಲ್ಡನ್ ಗರ್ಲ್ ಸರಿತಾ ಗೇಕ್ವಾಡ್ ಈಗ ಹಣಕಾಸಿನ ಸಮಸ್ಯೆಯನ್ನು ಎದುರಿಸ್ತಿದ್ದಾರೆ. ಇಂಡೋನೇಷ್ಯಾದಲ್ಲಿರುವ ಅವರಿಗೆ ಶಾಪಿಂಗ್ ಮಾಡೋದಕ್ಕೆ ಹಣದ ಕೊರತೆ ಉಂಟಾಗಿದೆ. ಅದಕ್ಕಾಗಿಯೇ ಸರಿತಾ ತಮ್ಮ ರಾಖಿ ಸಹೋದರನಿಗೆ ಹಣ ಕಳಿಸುವಂತೆ ಕೇಳಿಕೊಂಡಿದ್ದಾರೆ.

ಸರಿತಾ ಓದಿರುವಂತಾ ಚಿಕ್ಲಿ ಕಾಲೇಜಿನ ಟ್ರಸ್ಟಿ ಆಗಿರುವ ದರ್ಶನ್ ದೇಸಾಯಿ ಸರಿತಾ ರಾಖಿ ಸೋದರ. ಕ್ರೀಡಾಕೂಟದ ಆರಂಭದಲ್ಲೇ ಸರಿತಾಗೆ ಕೆಲ ಅಗತ್ಯ ವಸ್ತುಗಳ ಖರೀದಿಗೆ ಹಣದ ಅವಶ್ಯಕತೆ ಇತ್ತು. ಹಾಗಾಗಿಯೇ ದರ್ಶನ್ ದೇಸಾಯಿ 45 ಸಾವಿರ ರೂಪಾಯಿಗಳನ್ನು ಸರಿತಾ ಅಕೌಂಟ್ ಗೆ ಜಮಾ ಮಾಡಿದ್ದಾರೆ. ಚಿನ್ನ ಗೆದ್ದ ಸರಿತಾಗೆ ವೀರ್ ನರ್ಮದ್ ಸೌತ್ ಗುಜರಾತ್ ಯೂನಿವರ್ಸಿಟಿ ತನ್ನ ಬ್ರ್ಯಾಂಡ್ ಅಂಬಾಸಿಡರ್ ಆಗಿ ಆಯ್ಕೆ ಮಾಡಿ ಎರಡು ಲಕ್ಷ ರೂಪಾಯಿ ಬಹುಮಾನದ ಮೊತ್ತ ಘೋಷಣೆ ಮಾಡಿದ್ದಾರೆ.

ಚಿನ್ನ ಗೆದ್ದು ಭಾರತಕ್ಕೆ ಕೀರ್ತಿ ತಂದ ರೈತ ಕುಟುಂಬದ ಹುಡುಗಿಗೆ ಗುಜರಾತ್ ಸರ್ಕಾರ ಈಗಾಗ್ಲೇ ಕೋಟ್ಯಾಂತರ ರೂಪಾಯಿ ಬಹುಮಾನ ಘೋಷಣೆ ಮಾಡಿದೆ. ಹಾಗಿದ್ದರು ಬುಡಕಟ್ಟು ಸಮುದಾಯದ ಯುವತಿಯ ಖಾತೆಗೆ ಇನ್ನೂ ಬಹುಮಾನದ ಮೊತ್ತ ಜಮಾ ಆಗಿಲ್ಲ. ಸರಿತಾ ಎರಡು ವರ್ಷದ ಹಿಂದೆ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ತೋರಿದ ಅಪ್ರತಿಮ ಸಾಧನೆಗೂ ಸರ್ಕಾರ 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು.

ಆದರೆ ಆ ಹಣವೂ ಇನ್ನೂ ಸರಿತಾಗೆ ಸಿಕ್ಕಿಲ್ಲ. ಈ ಬಗ್ಗೆ ಗುಜರಾತ್ ಸರ್ಕಾರದ ಕ್ರೀಡಾ ಇಲಾಖೆ ಕಾರ್ಯದರ್ಶಿ ಈ ವಿಚಾರದ ಬಗ್ಗೆ ನನಗೆ ಈಗಷ್ಟೇ ಮಾಹಿತಿ ಸಿಕ್ಕಿರೋದ್ರಿಂದ ತನಿಖೆ ನಡೆಸೋದಾಗಿ ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...