alex Certify
ಕನ್ನಡ ದುನಿಯಾ       Mobile App
       

Kannada Duniya

ಸಹ ಆಟಗಾರನಿಗೆ ಡಿಕ್ಕಿ : ಗೋಲ್ ಕೀಪರ್ ಸಾವು

ಇಂಡೋನೇಷ್ಯಾದ ಸೂಪರ್ ಲೀಗ್ ನಲ್ಲಿ ಸಹ ಆಟಗಾರ ಡಿಕ್ಕಿ ಹೊಡೆದ ಪರಿಣಾಮ ಗೋಲ್ ಕೀಪರ್ ಚೋರುಲ್ ಹುಡಾ ಸಾವನ್ನಪ್ಪಿದ್ದಾರೆ. ಲಾವೊಂಗ್ ಫುಟ್ಬಾಲ್ ಕ್ಲಬ್ ಹಾಗೂ ಸೆಮೆನ್ ಪಡಂಗ್ ನಡುವೆ ಪಂದ್ಯ ನಡೆಯುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಪಂದ್ಯದ ವೇಳೆ ಬ್ರೆಜಿಲ್ ಆಟಗಾರ ರಾಮನ್ ರೋಡ್ರಿಗಸ್ ಚೋರುಲ್ ಹುಡಾಗೆ ಡಿಕ್ಕಿ ಹೊಡೆದಿದ್ದಾರೆ. ಎದೆ ಹಾಗೂ ಮುಖಕ್ಕೆ ರಾಮನ್ ರೋಡ್ರಿಗಸ್ ಮಂಡಿ ತಗುಲಿದೆ. ತಕ್ಷಣ ಮೈದಾನದಲ್ಲಿಯೇ ಹುಡಾ ಕುಸಿದು ಬಿದ್ದಿದ್ದಾರೆ. ಅಲ್ಲಿಯೇ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಹುಡಾ ಸಾವನ್ನಪ್ಪಿದ್ದಾರೆ.

38 ವರ್ಷದ ಹುಡಾ ಇಂಡೋನೇಷ್ಯಾದ ದಿಗ್ಗಜ ಗೋಲ್ ಕೀಪರ್ ಆಗಿದ್ದರು. ಸಾವಿರಾರು ಅಭಿಮಾನಿಗಳು ಹುಡಾ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಹುಡಾ ನಿಧನವನ್ನು ನಂಬಲು ಸಾಧ್ಯವಾಗ್ತಿಲ್ಲ ಎಂದು ತರಬೇತುದಾರರು ಹೇಳಿದ್ದಾರೆ. 1999ರಲ್ಲಿ ವೃತ್ತಿ ಶುರುಮಾಡಿದ್ದ ಹುಡಾ ಈವರೆಗೆ 503 ಪಂದ್ಯಗಳನ್ನು ಆಡಿದ್ದರು.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...