alex Certify
ಕನ್ನಡ ದುನಿಯಾ       Mobile App
       

Kannada Duniya

ಟಿ-20ಯಲ್ಲಿ 10 ಸಾವಿರ ರನ್ ಗಳಿಸಿ ದಾಖಲೆ ಬರೆದ ಗೇಲ್

download-1

ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಐಪಿಎಲ್ ನಲ್ಲಿ ದಾಖಲೆ ಬರೆದಿದ್ದಾರೆ. ಏಪ್ರಿಲ್ 18ರಂದು ರಾಜ್ಕೋಟಾದಲ್ಲಿ ಗುಜರಾತ್ ಲಯನ್ಸ್ ವಿರುದ್ಧ ಗೇಲ್ ದಾಖಲೆ ಬರೆದಿದ್ದಾರೆ. ಟಿ-20 ಪಂದ್ಯದಲ್ಲಿ ಅತಿ ಹೆಚ್ಚು 10000 ರನ್ ಗಳಿಸಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಬಾರಿಯ ಐಪಿಎಲ್ ನಲ್ಲಿ ಗೇಲ್ ಉತ್ತಮ ಪ್ರದರ್ಶನ ತೋರಿಲ್ಲ. ಹಿಂದಿನ ಪಂದ್ಯದಲ್ಲಿ ಆರ್ ಸಿಬಿ ಪರ ಕಣಕ್ಕಿಳಿದಿರಲಿಲ್ಲ. ಆದ್ರೆ ಮಂಗಳವಾರ ಆರ್ ಸಿಬಿ ಆರಂಭಿಕ ಬ್ಯಾಟ್ಸ್ ಮೆನ್ ಆಗಿ ಕಣಕ್ಕಿಳಿದ ಗೇಲ್ ಮೂರು ರನ್ ಗಳಿಸುತ್ತಲೇ ದಾಖಲೆ ಬರೆದ್ರು. ಟ್ವೆಂಟಿ-20ಯಲ್ಲಿ 10000 ರನ್ ಗಳಿಸಿದ ಆಟಗಾರ ಎಂಬ ಪಟ್ಟಿಯಲ್ಲಿ 37 ವರ್ಷದ ಗೇಲ್ ತಮ್ಮ ಹೆಸರು ದಾಖಲಿಸಿದ್ರು.

ಟಿ-20 ವೃತ್ತಿ ಜೀವನದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿ ಇಲ್ಲಿದೆ:

ಕ್ರಿಸ್ ಗೇಲ್ (2005-2017): 290 ಪಂದ್ಯ, 285 ಇನ್ನಿಂಗ್ಸ್, 10074 ರನ್, 18 ಶತಕ

ಬ್ರೆಂಡನ್ ಮೆಕಲಮ್ (2005-17): 271 ಪಂದ್ಯ, 266 ಇನ್ನಿಂಗ್ಸ್, 7524 ರನ್,  7 ಶತಕ

ಬ್ರಾಡ್ ಹಾಗ್ (2003-17): 270 ಪಂದ್ಯ,  256 ಇನ್ನಿಂಗ್ಸ್, 7338 ರನ್,  2 ಶತಕ

ಡೇವಿಡ್ ವಾರ್ನರ್ (2007-17): 227 ಪಂದ್ಯ, 226 ಇನ್ನಿಂಗ್ಸ್,  7156 ರನ್, ಐದು ಶತಕ

ಕೀರನ್ ಪೊಲಾರ್ಡ್ (2006-17): 363 ಪಂದ್ಯ, 326 ಇನ್ನಿಂಗ್ಸ್, 7087 ರನ್,  0 ಶತಕ

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...