alex Certify
ಕನ್ನಡ ದುನಿಯಾ       Mobile App
       

Kannada Duniya

ಸೀರೆ ಉಟ್ಟು, ಬಿಂದಿ ಇಟ್ಟ ‘ಗೌತಿ’ ನಡೆಗೆ ಮೆಚ್ಚುಗೆ

ಟೀಮ್ ಇಂಡಿಯಾ ಆಟಗಾರ ಗೌತಮ್ ಗಂಭೀರ್, ಸಮಾಜಕ್ಕೆ ಸಂಬಂಧಿಸಿದಂತೆ ತಮ್ಮ ಆಲೋಚನೆಗಳಿಂದ ಸುದ್ದಿಯಲ್ಲಿರುತ್ತಾರೆ. ದೆಹಲಿಯಲ್ಲಿ ನಡೆದ ಹಿಜ್ರಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಗೌತಿ, ಸೀರೆ ಉಟ್ಟು, ಹಣೆಗೆ ಕುಂಕುಮ ಇಟ್ಟು ಲೈಂಗಿಕ ಅಲ್ಪಸಂಖ್ಯಾತರಿಗೆ ಬೆಂಬಲ ಸೂಚಿಸುವ ಮೂಲಕ ಗಮನ ಸೆಳೆದ್ರು.

ಗಂಭೀರ್, ಮಂಗಳಮುಖಿಯರ ಸಮಾನತೆಯ ಪರವಾಗಿ ಧ್ವನಿ ಎತ್ತುವ ನಿಟ್ಟಿನಲ್ಲಿ ಈ ರೀತಿ ವೇಷ ತೊಟ್ಟಿದ್ದರು. ದೆಹಲಿಯಲ್ಲಿ ಹಿಜ್ರಾ ಹಬ್ಬದ ಉದ್ಘಾಟನೆಯಲ್ಲಿ ಪಾಲ್ಗೊಂಡಿದ್ದ ಗೌತಿ, ಎಲ್ಲರ ಗಮನ ಸೆಳೆದ್ರು. ಈ ಬಾರಿ ಹಿಜ್ರಾ ಹಬ್ಬವನ್ನು ಎಚ್.ಐ.ವಿ ಹಾಗೂ ಏಡ್ಸ್ ಅಲೈನ್ಸ್ ಇಂಡಿಯಾ ವತಿಯಿಂದ ಆಚರಿಸಲಾಯಿತು. ಗೌತಮ್ ಅವರ ಈ ನಡೆಗೆ ಸಾಮಾಜಿಕ ತಾಣದಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ.

ಇತ್ತೀಚಿಗೆ ಸುಪ್ರೀಂ ಕೋರ್ಟ್ ಸಲಿಂಗ ಕಾಮದ ಬಗ್ಗೆ ಐತಿಹಾಸಿಕ ತೀರ್ಪು ನೀಡಿತ್ತು. ಅಲ್ಲದೆ ಸಲಿಂಗ ಕಾಮಿಗಳಿಗೆ ಬೇರೆಯವರಂತೆ ಬದುಕಲು ಅವಕಾಶ ಇರೋದಾಗಿ ತಿಳಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...