alex Certify
ಕನ್ನಡ ದುನಿಯಾ       Mobile App
       

Kannada Duniya

ಬಾಕ್ಸರ್ ಡಿಂಕೊ ಸಿಂಗ್ ನೆರವಿಗೆ ಗೌತಮ್ ಗಂಭೀರ್

gautam-gambhir-gives-financial-aid-to-dingko-singh980-1486635571_980x457

ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿರುವ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ ಬಾಕ್ಸರ್ ಡಿಂಕೊ ಸಿಂಗ್ ನೆರವಿಗೆ ಕ್ರಿಕೆಟರ್ ಗೌತಮ್ ಗಂಭೀರ್ ಧಾವಿಸಿದ್ದಾರೆ. ಗಂಭೀರ್, ಡಿಂಕೊ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಿದ್ದಾರೆ.

ಡಿಂಕೊ ಸ್ಟಾರ್ ಬಾಕ್ಸರ್ ಗಳಲ್ಲಿ ಒಬ್ಬರಾಗಿದ್ದಾರೆ. ಅವರು ಈಗ ಸಂಕಷ್ಟದಲ್ಲಿದ್ದು, ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ಅವರಿಗೆ ನೆರವು ನೀಡಬೇಕೆಂದು ಗೌತಮ್ ಹೇಳಿದ್ದಾರೆ. ಹಾಗೆ ನಮ್ಮ ಸಹಾಯಕ್ಕೆ ಪ್ರಚಾರ ನೀಡುವುದು ಬೇಡ ಎಂದೂ ಗಂಭೀರ್ ಹೇಳಿದ್ದಾರೆ.

ಡಿಂಕೊ ಲಿವರ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಅವರಿಗೆ ಆರ್ಥಿಕ ನೆರವು ಬೇಕಾಗಿದೆ. ಹಣಕ್ಕಾಗಿ ಇದ್ದ ಮನೆಯನ್ನೂ ಡಿಂಕೊ ಮಾರಿದ್ದಾರೆ. 1998ರ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಅವರ ಸ್ಥಿತಿ ಬಗ್ಗೆ ತಿಳಿದ ಕೇಂದ್ರ ಸರ್ಕಾರ ಕೂಡ ನಾಲ್ಕು ದಿನಗಳ ಹಿಂದೆ ಸಹಾಯ ಮಾಡುವುದಾಗಿ ಭರವಸೆ ನೀಡಿದೆ.

ಪದ್ಮಶ್ರೀ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಕ್ರೀಡಾಪಟು ಸದ್ಯ ದೆಹಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಅವರಿಗೆ ಲಿವರ್ ಶಸ್ತ್ರಚಿಕಿತ್ಸೆ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...