alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಸಲಹಾ ಸಮಿತಿಯ ಸೂಚನೆಗೂ ಇಲ್ಲ ಕವಡೆ ಕಾಸಿನ ಕಿಮ್ಮತ್ತು

ಇಂಗ್ಲೆಂಡ್ ಪ್ರವಾಸದಲ್ಲಿ ಟೀಮ್ ಇಂಡಿಯಾ ನೀಡಿದ ಪ್ರದರ್ಶನದ ವಿರುದ್ಧ ಟೀಕೆಗಳು ಕೇಳಿ ಬಂದಿದೆ. ಟೆಸ್ಟ್ ನಲ್ಲಿ ನಂಬರ್ 1 ಟೀಮ್ ಎಂಬ ಹಣೆ ಪಟ್ಟಿ ಹೊಂದಿರುವ ವಿರಾಟ್ ಪಡೆ, ಇಂಗ್ಲೆಂಡ್ ವಿರುದ್ಧ 5 ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 1-3 ರಿಂದ ಹಿನ್ನಡೆ ಅನುಭವಿಸುತ್ತಿದೆ. ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ರೂಟ್ ಪಡೆ ಸರಣಿ ತನ್ನ ವಶಕ್ಕೆ ಪಡೆದುಕೊಂಡಿದೆ.

ಇಂಗ್ಲೆಂಡ್ ನಲ್ಲಿ ಕಂಡ ಹೀನಾಯ ಸೋಲಿಗೆ ವಿರಾಟ್ ಪಡೆ ಟೀಕೆಗಳಿಗೆ ಆಹಾರವಾಗಿದೆ. ಆಟಗಾರರು ಅಷ್ಟೇ ಏಕೆ, ತಂಡದ  ಮುಖ್ಯ ಕೋಚ್ ರವಿಶಾಸ್ತ್ರಿ ವಿರುದ್ಧವೂ ಟೀಕೆಗಳು ಕೇಳಿ ಬಂದಿವೆ.

ಅಂದ ಹಾಗೆ ಟೀಮ್ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಅವರಿಂದ ತೆರವಾದ ಸ್ಥಾನಕ್ಕೆ, ಮಾಜಿ ಆಟಗಾರ ರವಿ ಶಾಸ್ತ್ರಿ ಅವರನ್ನು ಕ್ರಿಕೆಟ್ ಸಲಹಾ ಸಮಿತಿ ನೇಮಕ ಮಾಡಿತ್ತು. ಸಚಿನ್, ವಿವಿಎಸ್ ಲಕ್ಷ್ಮಣ ಹಾಗೂ ಸೌರವ್ ಗಂಗೂಲಿ ಈ ಸಲಹಾ ಸಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಾರೆ. ಈ ವೇಳೆ ಶಾಸ್ತ್ರಿ ಕೋಚ್ ಆಗುವ ಬಗ್ಗೆ ಗಂಗೂಲಿಗೆ ಎಳ್ಳಷ್ಟೂ ಇಷ್ಟ ಇರಲಿಲ್ಲ. ಆದರೆ ಸಹೋದ್ಯೊಗಿಗಳ ಮಾತಿಗೆ ಮನ್ನಣೆ ನೀಡಿ, ಕೆಲವು ಷರತ್ತುಗಳನ್ನು ವಿಧಿಸಿ ಶಾಸ್ತ್ರಿಗೆ ಕೋಚ್ ಹುದ್ದೆಯಲ್ಲಿ ಗಂಗೂಲಿ ಕೂರಿಸಲು ಒಪ್ಪಿಕೊಂಡಿದ್ದರೆನ್ನಲಾಗಿದೆ.

ಈ ವೇಳೆ ಕ್ರಿಕೆಟ್ ಸಲಹಾ ಸಮಿತಿ, ರವಿ ಶಾಸ್ತ್ರಿ ಅವರಿಗೆ ಕೆಲ ಕಿವಿ ಮಾತನ್ನು ಹೇಳಿತ್ತು. ಟೀಮ್ ಇಂಡಿಯಾ ವಿದೇಶಗಳಿಗೆ ಪ್ರವಾಸ ಬೆಳೆಸುವಾಗ ಭಾರತ ಕಿರಿಯರ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ರನ್ನು ಬ್ಯಾಟಿಂಗ್ ಸಲಹೆಗಾರರಾಗಿ ಹಾಗೂ ಜಹೀರ್ ಖಾನ್ ರನ್ನು ಬೌಲಿಂಗ್ ಸಲಹೆಗಾರರನ್ನಾಗಿ ನೇಮಿಸಿಕೊಳ್ಳಲು ಸೂಚನೆ ನೀಡಿತ್ತು ಎನ್ನಲಾಗಿದೆ.

ಕೋಚ್ ಹುದ್ದೆ ಸಿಕ್ಕರೆ ಸಾಕು ಎಂಬ ಮನಃಸ್ಥಿತಿಯಲ್ಲಿದ್ದ ರವಿಶಾಸ್ತ್ರಿ, ಕ್ರಿಕೆಟ್ ಸಲಹಾ ಸಮಿತಿಯ ಎಲ್ಲ ನಿಬಂಧನೆಗಳಿಗೆ ಅಂದು ಒಪ್ಪಿಗೆ ನೀಡಿದ್ದಾರೆ. ಆದ್ರೆ, ಇವುಗಳನ್ನು ಕಾರ್ಯರೂಪಕ್ಕೆ ತರಲು ಮಾತ್ರ ಮುಂದಾಗಿಲ್ಲ. ಪ್ರಸಕ್ತ ವರ್ಷ ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯೂ ದ್ರಾವಿಡ್ ಹಾಗೂ ಜಹೀರ್ ಸೇವೆಯನ್ನು ಶಾಸ್ತ್ರಿ ಕಡೆಗಣಿಸಿದ್ದಾರೆ. ಈಗ ಇಂಗ್ಲೆಂಡ್ ವಿರುದ್ಧವೂ ರವಿ ಶಾಸ್ತ್ರಿ ಅದೇ ಚಾಳಿ ಮುಂದುವರೆಸಿದ್ದಾರೆ ಎನ್ನಲಾಗ್ತಿದೆ.

ಕೋಚ್ ಸ್ಥಾನ ಸಿಕ್ಕ ಮೇಲೆ ರವಿಶಾಸ್ತ್ರಿ ನಡುವಳಿಕೆಗೆ ಟೀಕೆಗಳು ಕೇಳಿ ಬಂದಿವೆ. ಇನ್ನು ಕ್ರಿಕೆಟ್ ಸಲಹಾ ಸಮಿತಿಯ ಸದಸ್ಯ ಸೌರವ್ ಗಂಗೂಲಿ ಸಹ, ದ್ರಾವಿಡ್ ರನ್ನ ಬ್ಯಾಟಿಂಗ್ ಸಲಹೆಗಾರರನ್ನಾಗಿ ಆಯ್ಕೆ ಮಾಡದ್ದಕ್ಕೆ ಕಿಡಿ ಕಾರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...