alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿ ಕಾಲು ಮುಟ್ಟಿ ನಮಸ್ಕರಿಸಿದ ಅಭಿಮಾನಿ ನೋಡಿ ದಂಗಾದ ಮುರಳಿ…!

ಅಭಿಮಾನಿಯೊಬ್ಬ ಚೆನ್ನೈ ಸೂಪರ್ ಕಿಂಗ್ಸ್ ನಾಯಕ ಮಹೇಂದ್ರ ಸಿಂಗ್ ಧೋನಿ ಕಾಲುಮುಟ್ಟಿ ಆಶೀರ್ವಾದ ಪಡೆದ ಘಟನೆ ನಡೆದಿದೆ. ಗುರುವಾರ ನಡೆದ ಪಂದ್ಯದ ವೇಳೆ ಧೋನಿ ಆಟಗಾರರ ಜೊತೆ ಪೆವಿಲಿಯನ್ ನಲ್ಲಿ ಮಾತನಾಡ್ತಿದ್ದರು. ಈ ವೇಳೆ ಅಲ್ಲಿಗೆ ಓಡಿ ಬಂದ ಸಣ್ಣ ಹುಡುಗನೊಬ್ಬ ಧೋನಿ ಕಾಲು ಮುಟ್ಟಿ ನಮಸ್ಕರಿಸಿದ್ದಾನೆ.

ಧೋನಿ ಸಹಜವಾಗಿಯೇ ಆತನ ತಲೆ ಮೇಲೆ ಕೈ ಇಟ್ಟು ಆಶೀರ್ವಾದ ಮಾಡಿದ್ದಾರೆ. ಹುಡುಗನ ಹಿಂದೆಯೇ ಓಡಿ ಬಂದ ಭದ್ರತಾ ಸಿಬ್ಬಂದಿ ಹುಡುಗನನ್ನು ಅಲ್ಲಿಂದ ಕಳುಹಿಸಿದ್ದಾರೆ. ಈ ವೇಳೆ ಧೋನಿ ಪಕ್ಕದಲ್ಲಿ ಕುಳಿತಿದ್ದ ಮುರಳಿ ವಿಜಯ್ ಪ್ರತಿಕ್ರಿಯೆ ಅಭಿಮಾನಿಗಳಿಗೆ ಇಷ್ಟವಾಗಿದೆ. ಹುಡುಗ ಓಡಿ ಬಂದು ಧೋನಿ ಕಾಲು ಮುಟ್ಟುತ್ತಿದ್ದಂತೆ ಮುರಳಿ ವಿಜಯ್ ಆಶ್ಚರ್ಯಕ್ಕೊಳಗಾದ್ರು. ನಂತ್ರ ಧೋನಿ ಮುಖ ನೋಡಿ ನಕ್ಕರು.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ರಿಕೆಟ್ ಅಭಿಮಾನಿಗಳು ವಿಡಿಯೋವನ್ನು ಇಷ್ಟಪಡ್ತಿದ್ದಾರೆ. ಮುರಳಿ ವಿಜಯ್ ಒಂದೇ ಅಲ್ಲ ಜಡೇಜಾ ಸೇರಿದಂತೆ ಅಲ್ಲಿದ್ದ ಆಟಗಾರರ ಪ್ರತಿಕ್ರಿಯೆ ಭಿನ್ನಭಿನ್ನವಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...