alex Certify
ಕನ್ನಡ ದುನಿಯಾ       Mobile App
       

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಈ ಕ್ರಿಕೆಟರ್ ಬದುಕಿನ ಕಥೆ

ಸಾಧನೆಯೆನ್ನುವುದು ಹಸಿವಿನಲ್ಲಿ ಕೈಗೆಟಕುವುದೇ ಹೊರತು ಐಷಾರಾಮಿ ಜೀವನದಲ್ಲಲ್ಲ ಎಂಬುದನ್ನು ಸಾಬೀತುಪಡಿಸಿರುವ ಪ್ರತಿಭೆ ಬಂಗಾಲದ ಯುವ ಸ್ಪಿನ್ನರ್ ಪಪ್ಪು ರೇ. ಅಪ್ಪ, ಅಮ್ಮ ಎಂದು ಕೂಗುವ ಮೊದಲೇ ಹೆತ್ತವರನ್ನು ಕಳೆದುಕೊಂಡಿದ್ದ ಅನಾಥ ಶಿಶುವೊಂದು ಇಂದು ಅಜಿಂಕ್ಯ ರೆಹಾನೆ ನೇತೃತ್ವದ ಭಾರತ ಸಿ ತಂಡದ ಪ್ರತಿನಿಧಿ.

ಒಂದು ಕಾಲದಲ್ಲಿ ಈತ ತನ್ನ ಹೊಟ್ಟೆ ತುಂಬಿಸಿಕೊಳ್ಳುವ ಸಲುವಾಗಿ ಬೌಲಿಂಗ್ ಪ್ರಾರಂಭಿಸಿದಾತ. ಮನಮಿಡಿಯುವ ಈತನ ಬದುಕಿನ ಪಯಣದ ಹಿನ್ನೋಟ ಯಾವ ಸಿನಿಮಾ ಸ್ಟೋರಿಗೂ ಕಡಿಮೆಯಿಲ್ಲ.

ಬಿಹಾರ ಮೂಲದ ಈ ಪ್ರತಿಭಾವಂತನನ್ನು ಚಿಕ್ಕಂದಿನಿಂದಲೂ ಸಾಕಿ ಸಲಹಿದ್ದು, ಚಿಕ್ಕಪ್ಪ-ಚಿಕ್ಕಮ್ಮ. ಹೊಟ್ಟೆಪಾಡಿಗಾಗಿ ಕೋಲ್ಕತಾಗೆ ಆಗಮಿಸಿದ ಇವರಿಬ್ಬರೂ ಜೊತೆಯಲ್ಲಿ ಪಪ್ಪು ರೇಯನ್ನೂ ಕರೆದುಕೊಂಡು ಬಂದರು. ಕೂಲಿ ಕೆಲಸ ಮಾಡುತ್ತಿದ್ದ ಚಿಕ್ಕಮ್ಮನೂ ತೀರಿ ಹೋದ ಬಳಿಕ ಜೀವನ ಇನ್ನೂ ದುಸ್ತರವಾಯಿತು.

ಒಂದು ಹೊತ್ತಿನ ತುತ್ತಿಗೂ ಪರದಾಡುವಂತಾಯಿತು. ಬಾಲ್ಯದಲ್ಲಿ ಈತನ ಬೌಲಿಂಗ್ ಕೌಶಲ್ಯ ನೋಡಿದವರು ಈತನಿಗೆ ಊಟದ ಆಸೆ ತೋರಿಸಿ ಬೌಲಿಂಗ್ ಮಾಡಿಸುತ್ತಿದ್ದರಂತೆ. `ಒಂದು ವಿಕೆಟ್ ಪಡೆದರೆ ಹತ್ತು ರುಪಾಯಿ ನೀಡುತ್ತಿದ್ದರು. ದೇವಧರ್ ಟ್ರೋಫಿ ಆಡಲಿರುವ ಇಂಡಿಯಾ ಸಿ ತಂಡಕ್ಕೆ ಸೆಲೆಕ್ಟ್ ಆಗಿದ್ದೇನೆ ಎಂದು ತಿಳಿದಾಗ ರಾತ್ರಿಯಿಡೀ ನಿದ್ದೆ ಬರದೆ ಅತ್ತಿದ್ದೆ’ ಎಂದು ಈತ ಹೇಳಬೇಕಾದರೆ ಆತನ ಕಣ್ಣುಗಳು ಮಂಜಾಗುತ್ತವೆ. ಜೊತೆಗೆ ಕೇಳುಗರದ್ದೂ.

ಆತನ ಹಸಿವೇ ಆತನನ್ನು ಈ ಮಟ್ಟಕ್ಕೆ ತಂದು ನಿಲ್ಲಿಸಿರುವುದು. ಇಂದಿಗೂ ಕೋಲ್ಕತಾದ ಪಿಕ್ನಿಕ್ ಗಾರ್ಡನ್ ನ ಪುಟ್ಟ ಬಾಡಿಗೆ ಮನೆಯಲ್ಲಿ ವಾಸಿಸುತ್ತಿರುವ ಆತನ ತಕ್ಷಣದ ಹೊಟ್ಟೆ ಹಸಿವೇನೋ ನೀಗಿರಬಹುದು. ಆದರೆ ವಿಕೆಟ್ ಪಡೆಯುವ ಆತನ ಹಸಿವು ನಿರಂತವಾಗಿರಲಿ, ಟೀಂ ಇಂಡಿಯಾಗೊಬ್ಬ ಅದ್ಭುತ ಸ್ಪಿನ್ನರ್ ಸಿಗಲಿ …ಎಂಬ ಹಾರೈಕೆ ನಮ್ಮದು. ಆಲ್ ದಿ ಬೆಸ್ಟ್ ರೇ…..

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...