alex Certify
ಕನ್ನಡ ದುನಿಯಾ       Mobile App
       

Kannada Duniya

ಬೈಕಿನಲ್ಲೇ ರಷ್ಯಾಕ್ಕೆ ಬಂದ ಸೌದಿ ಫುಟ್ಬಾಲ್ ತಂಡದ ಅಭಿಮಾನಿ

ಫುಟ್ಬಾಲ್ ಪ್ರಿಯರು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಹಬ್ಬಕ್ಕೆ ಚಾಲನೆ ಸಿಕ್ಕಿದೆ. ರಷ್ಯಾದಲ್ಲಿ 30 ದಿನಗಳ ಕಾಲ ನಡೆಯುವ ಫಿಫಾ ವಿಶ್ವಕಪ್ ವೀಕ್ಷಿಸಲು ದೇಶ-ವಿದೇಶಗಳ ಫುಟ್ಬಾಲ್ ಪ್ರಿಯರು ತೆರಳುತ್ತಿದ್ದಾರೆ. ಇದರ ಮಧ್ಯೆ ಸೌದಿ ಅರೇಬಿಯಾ ಫುಟ್ಬಾಲ್ ತಂಡದ ಅಭಿಮಾನಿಯೊಬ್ಬರು ತಮ್ಮ ತಂಡವನ್ನು ಬೆಂಬಲಿಸಲು ಬೈಕಿನಲ್ಲೇ ರಷ್ಯಾಗೆ ಬಂದು ಅಚ್ಚರಿ ಮೂಡಿಸಿದ್ದಾರೆ.

ಫಾದ್ ಅಲ್ ಯಹಯಾ ಎಂಬ ಈ ಅಭಿಮಾನಿ 75 ದಿನಗಳ ಕಾಲ ಸುಮಾರು 5,145 ಕಿಲೋಮೀಟರ್ ಕ್ರಮಿಸುವ ಮೂಲಕ ರಷ್ಯಾ ತಲುಪಿದ್ದು, ಪ್ರಯಾಣಕ್ಕೂ ಮುನ್ನ ರಿಯಾದ್  ಪ್ರದೇಶದ ರಾಜಕುಮಾರ ಫೈಸಲ್ ಬೆನ್ ಬಂದರ ಅಬ್ದುಲ್ ಅಜೀಜ್ ಅವರು ನೀಡಿದ ರಾಷ್ಟ್ರದ ಬಾವುಟವನ್ನು ಮಾಸ್ಕೋದಲ್ಲಿರುವ ಸೌದಿ ಅರೇಬಿಯಾ ರಾಯಭಾರ ಕಛೇರಿಯಲ್ಲಿ ರಾಯಭಾರಿ ರಮೀದ್ ಕ್ರಿಮ್ಲಿಯವರಿಗೆ ಒಪ್ಪಿಸಿದ್ದಾರೆ.

ತಮ್ಮ ತಂಡ ಈ ಬಾರಿಯ ಫಿಫಾ ವಿಶ್ವಕಪ್ ಗೆಲ್ಲಬೇಕೆಂಬ ಮಹಾದಾಸೆ ಹೊಂದಿರುವ ಫಾದ್ ಅಲ್ ಯಹಯಾ, ಇದಕ್ಕೆ ಪ್ರೋತ್ಸಾಹ ನೀಡುವ ಸಲುವಾಗಿಯೇ ಇಂತಹ ಸಾಹಸ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಫಾದ್ ಅಲ್ ಯಹಯಾ ಅವರ ಈ ಸಾಹಸದ ಸುದ್ದಿಯನ್ನು ಫಿಫಾ ವಿಶ್ವಕಪ್ ನ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...