alex Certify
ಕನ್ನಡ ದುನಿಯಾ       Mobile App
       

Kannada Duniya

ಧೋನಿಯಿಂದ ಕಿಡಂಬಿಗೆ ಸಿಕ್ತು ಅಪರೂಪದ ಗಿಫ್ಟ್…!

ಖ್ಯಾತ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿಯವರಿಗೆ ವಿಶ್ವದಾದ್ಯಂತ ಅಭಿಮಾನಿಗಳಿದ್ದಾರೆ. ಧೋನಿಯವರನ್ನು ಹತ್ತಿರದಿಂದ ನೋಡಲು, ಅವರ ಕೈ ಕುಲಕಲು ಅಭಿಮಾನಿಗಳು ಮುಗಿ ಬೀಳುತ್ತಾರೆ. ಕೆಲ ದಿನಗಳ ಹಿಂದಷ್ಟೇ ಯುವ ಅಭಿಮಾನಿಯೊಬ್ಬ ಐಪಿಎಲ್ ಪಂದ್ಯಾವಳಿ ಸಂದರ್ಭದಲ್ಲಿ ಧೋನಿಯವರ ಕಾಲು ಮುಟ್ಟಿ ನಮಸ್ಕರಿಸಿದ್ದ ಘಟನೆ ನಡೆದಿತ್ತು.

ಇಂತಹ ಘಟನೆಗಳ ಮಧ್ಯೆ ಧೋನಿಯವರ ಅಭಿಮಾನಿಯಾಗಿರುವ ಖ್ಯಾತ ಕ್ರೀಡಾಪಟುವೊಬ್ಬರು ತಮ್ಮ ಅಭಿಲಾಷೆಯಂತೆ ಧೋನಿಯವರಿಂದ ಅಪರೂಪದ ಗಿಫ್ಟ್ ಒಂದನ್ನು ಪಡೆದಿದ್ದಾರೆ. ಇತ್ತೀಚೆಗಷ್ಟೇ ವಿಶ್ವ ರ್ಯಾಕಿಂಗ್ ನಲ್ಲಿ ನಂಬರ್ 1 ಪಟ್ಟ ಪಡೆದಿರುವ ಖ್ಯಾತ ಬ್ಯಾಡ್ಮಿಂಟನ್ ತಾರೆ ಕಿಡಂಬಿ ಶ್ರೀಕಾಂತ್ ಅವರಿಗೆ ಧೋನಿಯೆಂದರೆ ಅಚ್ಚುಮೆಚ್ಚು.

ಧೋನಿಯವರ ಹಸ್ತಾಕ್ಷರ ಪಡೆಯುವ ಅಭಿಲಾಷೆ ಕಿಡಂಬಿ ಶ್ರೀಕಾಂತರದ್ದಾಗಿತ್ತು. ಇದನ್ನು ತಮ್ಮ ತಂದೆಯವರ ಶಿಷ್ಯ, ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ. ಪ್ರಸಾದ್ ಬಳಿ ಶ್ರೀಕಾಂತ್ ಹೇಳಿಕೊಂಡಿದ್ದರು. ಇದೀಗ ಧೋನಿ, ತಮ್ಮ ಹಸ್ತಾಕ್ಷರವಿರುವ ಬ್ಯಾಟ್ ಅನ್ನು ಶ್ರೀಕಾಂತ್ ಗೆ ನೀಡಿದ್ದು, ಇದನ್ನು ಎಂ.ಎಸ್.ಕೆ. ಪ್ರಸಾದ್, ಶ್ರೀಕಾಂತ್ ರಿಗೆ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...