alex Certify
ಕನ್ನಡ ದುನಿಯಾ       Mobile App
       

Kannada Duniya

ಫ್ರೆಂಚ್ ಓಪನ್ ವಿಜೇತ ನಡಾಲ್ ಗೆ ಸಿಕ್ಕ ಬಹುಮಾನದ ಮೊತ್ತವೆಷ್ಟು ಗೊತ್ತಾ?

ಅಗ್ರಮಾನ್ಯ ಆಟಗಾರ ಸ್ಪೇನ್ ನ ರಾಫೆಲ್ ನಡಾಲ್ ಫ್ರೆಂಚ್ ಓಪನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 11 ನೇ ಬಾರಿ ನಡಾಲ್ ಈ ಪ್ರಶಸ್ತಿಗೆ ಮುತ್ತಿಟ್ಟಿದ್ದಾರೆ. ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ನಡಾಲ್ ಆಸ್ಟ್ರೇಲಿಯಾದ ಡಾಮಿನಿಕ್ ಥೀಮ್ ಅವ್ರನ್ನು ಮಣಿಸಿದ್ರು.

ನಡಾಲ್ 6-4, 6-3, 6-2 ನೇರ ಸೆಟ್ ನಿಂದ ಥೀಮ್ ಮಣಿಸಿ ವೃತ್ತಿ ಜೀವನದಲ್ಲಿ 17 ನೇ ಬಾರಿ ಗ್ರ್ಯಾನ್ ಸ್ಲ್ಯಾಂ ತಮ್ಮದಾಗಿಸಿಕೊಂಡಿದ್ದಾರೆ. ಫ್ರೆಂಚ್ ಓಪನ್ ನಲ್ಲಿ ಗೆದ್ದ ನಡಾಲ್ ರಿಗೆ ಪ್ರಶಸ್ತಿ ರೂಪದಲ್ಲಿ 17.5 ಕೋಟಿ ರೂಪಾಯಿ ಸಿಕ್ಕಿದೆ. ಈ ಪಂದ್ಯಾವಳಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡ ಥೀಮ್ ಗೆ ಪ್ರಶಸ್ತಿ ರೂಪದಲ್ಲಿ 8.7 ಕೋಟಿ ರೂಪಾಯಿ ನೀಡಲಾಗಿದೆ.

ಫ್ರೆಂಚ್ ಒಪನ್ ನಲ್ಲಿ ವಿಜೇತರಾದವರಿಗೆ ಐಪಿಎಲ್ ವಿಜೇತರಿಗಿಂತ ಸ್ವಲ್ಪ ಕಡಿಮೆ ಹಣ ಸಿಗುತ್ತದೆ. ಐಪಿಎಲ್ ವಿಜೇತ ತಂಡಕ್ಕೆ 25 ಕೋಟಿ ಹಣ ಸಿಕ್ಕರೆ ಫ್ರೆಂಚ್ ಓಪನ್ ಪಂದ್ಯಾವಳಿ ವಿಜೇತರಿಗೆ 17.5 ಕೋಟಿ ರೂಪಾಯಿ ನೀಡಿ ಗೌರವಿಸಲಾಗುತ್ತದೆ. ಐಪಿಎಲ್ ನಲ್ಲಿ 17 ಕೋಟಿಗೆ ಟೀಂ ಇಂಡಿಯಾ ನಾಯಕ ಕೊಹ್ಲಿ ಮಾರಾಟವಾಗಿದ್ದಾರೆ. ಐಪಿಎಲ್ ನ ದುಬಾರಿ ಆಟಗಾರರಿಗಿಂತ ನಡಾಲ್ ಬಹುಮಾನದ ಮೊತ್ತ ಹೆಚ್ಚಿದೆ.

ಅತ್ಯಧಿಕ ಗಳಿಕೆ ಆಟಗಾರರ ಪಟ್ಟಿಯಲ್ಲೂ ನಡಾಲ್ ಹೆಸರಿದೆ. ಇತ್ತೀಚಿಗಷ್ಟೇ ಫೋರ್ಬ್ಸ್ ಬಿಡುಗಡೆ ಮಾಡಿದ ಅತಿ ಹೆಚ್ಚು ಗಳಿಸುವ ಆಟಗಾರರ ಪಟ್ಟಿಯಲ್ಲಿ ನಡಾಲ್ 20ನೇ ಸ್ಥಾನದಲ್ಲಿದ್ದಾರೆ.ಅವ್ರ ವರ್ಷದ ಗಳಿಕೆ 280 ಕೋಟಿ ರೂ. ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...