alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಫಾರ್ಮುಲಾ ಒನ್ ರೇಸರ್

ವಿಶ್ವ ಚಾಂಪಿಯನ್ ಫಾರ್ಮುಲಾ ಒನ್ ರೇಸರ್ ಲೂಯಿಸ್ ಹ್ಯಾಮಿಲ್ಟನ್ ಭಾರತದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಲೂಯಿಸ್ ಹ್ಯಾಮಿಲ್ಟನ್ ಹೇಳಿಕೆ ಪ್ರತಿಯೊಬ್ಬ ಭಾರತೀಯನ ಕೋಪಕ್ಕೆ ಕಾರಣವಾಗಲಿದೆ. ಭಾರತ ಒಂದು ಬಡ ದೇಶ ಎಂದಿರುವ ಲೂಯಿಸ್ ಹ್ಯಾಮಿಲ್ಟನ್, ಅಲ್ಲಿಗೆ ಹೋಗಿ ತಪ್ಪು ಮಾಡಿದೆ ಎಂದಿದ್ದಾರೆ.

ಭಾರತವೊಂದು ಬಡ ದೇಶ. ನಾನು ಅಲ್ಲಿಗೆ ಹೋದಾಗ ಸಾಕಷ್ಟು ಕೆಟ್ಟ ಅನುಭವವಾಯಿತು. ನಾನು ಅಲ್ಲಿಗೆ ಹೋಗಿ ತಪ್ಪು ಮಾಡಿದೆ ಎನ್ನಿಸುತ್ತದೆ ಎಂದು ಲೂಯಿಸ್ ಹ್ಯಾಮಿಲ್ಟನ್ ಹೇಳಿದ್ದಾರೆ. ಭಾರತದಂತಹ ಸ್ಥಳದಲ್ಲಿ ರೇಸಿಂಗ್ ಗಾಗಿ ಶ್ರೇಷ್ಠ ಟ್ರ್ಯಾಕ್ ಮಾಡುವುದು ನನ್ನ ಗ್ರಹಿಕೆ. ರೇಸಿಂಗ್ ಗಾಗಿ ಭಾರತಕ್ಕೆ ಹೋದಾಗ ವಿಚಿತ್ರ ಅನುಭವಗಳಾಗಿವೆ. ರೇಸಿಂಗ್ ಗೆ ಅಂಥಹ ಜಾಗವನ್ನು ಏಕೆ ಆಯ್ಕೆ ಮಾಡುತ್ತಾರೆ ಎಂದು ಲೂಯಿಸ್ ಹ್ಯಾಮಿಲ್ಟನ್ ಪ್ರಶ್ನೆ ಮಾಡಿದ್ದಾರೆ.

ಟರ್ಕಿ ಬಗ್ಗೆಯೂ ಮಾತನಾಡಿದ ಲೂಯಿಸ್ ಹ್ಯಾಮಿಲ್ಟನ್, ಟರ್ಕಿಯಲ್ಲಿ ಒಳ್ಳೆಯ ಟ್ರ್ಯಾಕ್ ಇದೆ. ಜೊತೆಗೆ ವೀಕೆಂಡ್ ನಲ್ಲಿ ಸುತ್ತಾಡಲು ಒಳ್ಳೆ ವಾತಾವರಣವಿರುತ್ತದೆ. ಆದ್ರೆ ಪ್ರೇಕ್ಷಕರ ಕೊರತೆ ಅಲ್ಲಿರುತ್ತದೆ. ಪ್ರೇಕ್ಷಕರು ಎಂಜಾಯ್ ಮಾಡುವ ಸ್ಥಳವನ್ನು ರೇಸ್ ಗೆ ಆಯ್ಕೆ ಮಾಡಬೇಕು. ಫಾರ್ಮುಲಾ ಒನ್ ರೇಸ್ ಬಗ್ಗೆ ತಿಳಿಯದ ಜಾಗದಲ್ಲಲ್ಲ ಎಂದು ಲೂಯಿಸ್ ಹ್ಯಾಮಿಲ್ಟನ್ ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...