alex Certify
ಕನ್ನಡ ದುನಿಯಾ       Mobile App
       

Kannada Duniya

OMG ! ಮಾಜಿ ಕ್ರಿಕೆಟಿಗನೀಗ ಟ್ಯಾಕ್ಸಿ ಚಾಲಕ

48755953

ಕ್ರಿಕೆಟ್ ಎಂದರೆ ಹಣದ ಸುರಿಮಳೆ ಎಂಬ ಮಾತಿದೆ. ಅದರಲ್ಲೂ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ತಮ್ಮ ದೇಶವನ್ನು ಪ್ರತಿನಿಧಿಸಿದ ಆಟಗಾರ ಕೋಟ್ಯಾಂತರ ರೂ. ಹಣ ಗಳಿಸಿರುತ್ತಾರೆಂಬ ಭಾವನೆ ಇದೆ. ನಿವೃತ್ತಿಯಾದ ಬಳಿಕವೂ ಈ ಆಟಗಾರರು ಕಮೆಂಟ್ರಿ ಹೇಳುತ್ತಲೋ, ಕಿರಿಯರಿಗೆ ಕ್ರಿಕೆಟ್ ತರಬೇತಿ ನೀಡುತ್ತಾ ಹಣ ಸಂಪಾದಿಸುತ್ತಾರೆಂಬ ಮಾತುಗಳೂ ಕೇಳಿ ಬರುತ್ತವೆ.

ಆದರೆ ಇದೆಲ್ಲಾ ನಂಬಿಕೆಯನ್ನು ಸುಳ್ಳು ಮಾಡುವಂತಹ ಪ್ರಕರಣವೊಂದು ಬೆಳಕಿಗೆ ಬಂದಿದೆ. ಇದನ್ನು ಬಯಲು ಮಾಡಿರುವವರು ಭಾರತೀಯರೊಬ್ಬರು. ಪಾಕಿಸ್ತಾನದ ಪರ ಅಂತರಾಷ್ಟ್ರೀಯ ಪಂದ್ಯಗಳನ್ನಾಡಿರುವ ಮಾಜಿ ಕ್ರಿಕೆಟಗ ಅರ್ಶದ್ ಖಾನ್, ಜೀವನೋಪಾಯಕ್ಕಾಗಿ ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ಯೂಬರ್ ಟ್ಯಾಕ್ಸಿ ಚಾಲನೆ ಮಾಡುತ್ತಿದ್ದಾರೆ. ಈ ಟ್ಯಾಕ್ಸಿಯಲ್ಲಿ ಪ್ರಯಾಣಿಸಿದ್ದ ಗಣೇಶ್ ಬಿರ್ಲೆ ಎಂಬವರೇ ತಮ್ಮ ಫೇಸ್ ಬುಕ್ ಅಕೌಂಟಿನಲ್ಲಿ ಅರ್ಶದ್ ಖಾನ್ ಕುರಿತು ಬರೆದಿದ್ದಾರೆ.

ಗಣೇಶ್ ಬಿರ್ಲೆ ಯೂಬರ್ ಟ್ಯಾಕ್ಸಿ ಬುಕ್ ಮಾಡಿದ್ದು, ಈ ಟ್ಯಾಕ್ಸಿಯನ್ನು ಅರ್ಶದ್ ಖಾನ್ ಚಾಲನೆ ಮಾಡುತ್ತಿದ್ದರೆನ್ನಲಾಗಿದೆ. ಚಾಲನೆ ವೇಳೆ ಸಹಜವಾಗಿಯೇ ಗಣೇಶ್, ಚಾಲಕನೊಂದಿಗೆ ಮಾತಿಗಿಳಿದಿದ್ದು, ಆತ ತಾನು ಪಾಕಿಸ್ತಾನದವನೆಂದು ಹೇಳಿಕೊಂಡಿದ್ದಾರೆ. ಅಲ್ಲದೇ ಭಾರತಕ್ಕೂ ಹಲವು ಬಾರಿ ಭೇಟಿ ನೀಡಿರುವುದಾಗಿ ಹೇಳಿದ್ದಾರೆ. ಆತನನ್ನು ಎಲ್ಲೋ ನೋಡಿರುವಂತೆ ಭಾಸವಾದ ಗಣೇಶ್ ಹೆಚ್ಚು ಕೆದಕಿದಾಗ ಆತ ಪಾಕಿಸ್ತಾನದ ಮಾಜಿ ಕ್ರಿಕೆಟಿಗನೆಂಬ ಅಂಶ ತಿಳಿದು ಬಂದಿದೆ.

ಅರ್ಶದ್ ಖಾನ್ ಈಗ ಪಾಕಿಸ್ತಾನ ತೊರೆದು ಬಹು ಕಾಲದಿಂದ ಸಿಡ್ನಿಯಲ್ಲೇ ನೆಲೆಸಿರುವರೆನ್ನಲಾಗಿದ್ದು, ಯೂಬರ್ ಟ್ಯಾಕ್ಸಿ ಚಾಲನೆ ಮಾಡುತ್ತಿದ್ದಾರೆ. 1997-98 ರಲ್ಲಿ ವೆಸ್ಟ್ ಇಂಡೀಸ್ ವಿರುದ್ದದ ಪಂದ್ಯದಲ್ಲಿ ಪಾಕ್ ತಂಡಕ್ಕೆ ಪಾದಾರ್ಪಣೆ ಮಾಡಿದ್ದ ಅರ್ಶದ್ ಖಾನ್, 9 ಟೆಸ್ಟ್ ಹಾಗೂ 58 ಏಕ ದಿನ ಪಂದ್ಯಗಳನ್ನಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...