alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಫೋಟೋ ಹಾಕಿ ಹೀಗೆ ಟ್ವಿಟ್ ಮಾಡಿದ ಪಾಕ್ ಮಾಜಿ ಕ್ರಿಕೆಟರ್

ಟೀ ಇಂಡಿಯಾ ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ಇಂಗ್ಲೆಂಡ್ ವಿರುದ್ಧ ಎರಡನೇ ಟೆಸ್ಟ್ ಪಂದ್ಯವನ್ನಾಡ್ತಿದೆ. ಮೊದಲ ಟೆಸ್ಟ್ ನಲ್ಲಿ ಸೋಲುಂಡಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಕೈವಶ ಮಾಡಿಕೊಳ್ಳುವ ಅನಿವಾರ್ಯತೆಯಿದೆ. ಟೆಸ್ಟ್ ಪಂದ್ಯಕ್ಕೂ ಮುನ್ನ ಗುರುವಾರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯನ್ನು ಪಾಕಿಸ್ತಾನದ ಮಾಜಿ ಕ್ರಿಕೆಟರ್ ಅಜರ್ ಮಹಮ್ಮದ್ ಭೇಟಿಯಾಗಿದ್ದಾರೆ.

ಅಜರ್, ಕೊಹ್ಲಿ ಭೇಟಿಯ ಫೋಟೋವನ್ನು ಸಾಮಾಜಿಕ ಜಾಲತಾಣ ಟ್ವೀಟರ್ ಗೆ ಹಾಕಿದ್ದಾರೆ. ನಿಮ್ಮನ್ನು ಭೇಟಿಯಾಗಲು ಖುಷಿಯಾಗುತ್ತದೆ ಕೊಹ್ಲಿ. ಯುವಕರು ಹಾಗೂ ಹಿರಿಯರಿಗೆ ನೀವು ಪ್ರೇರಣೆ. ಶುಭವಾಗಲಿ ಎಂದು ಅಜರ್ ಟ್ವಿಟ್ ಮಾಡಿದ್ದಾರೆ.

ಸದ್ಯ ಅಜರ್, ಪಾಕಿಸ್ತಾನ ಕ್ರಿಕೆಟ್ ತಂಡದ ಬೌಲಿಂಗ್ ಕೋಚ್. ಅಜರ್ ಬ್ರಿಟನ್ ನಾಗರೀಕತ್ವ ಪಡೆದಿದ್ದು, ಬ್ರಿಟನ್ ಪಾಸ್ಪೋರ್ಟ್ ಹೊಂದಿದ್ದಾರೆ. ಮೊದಲ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ್ದ ಕೊಹ್ಲಿ ಐಸಿಸಿ ರ್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...