alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತ ಧೋನಿ

ಇಬ್ಬರು ವ್ಯಕ್ತಿಗಳು ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ಬೆಂಬಲಕ್ಕೆ ನಿಂತಿದ್ದಾರೆ. ಒಬ್ಬರು ಟೀಂ ಇಂಡಿಯಾ ಮಾಜಿ ನಾಯಕ ಎಂ.ಎಸ್. ಧೋನಿಯಾದ್ರೆ ಇನ್ನೊಬ್ಬರು ಶಮಿ ಮಾವ ಮೊಹಮ್ಮದ್ ಹಸನ್.

ಟೀಂ ಇಂಡಿಯಾ ಆಟಗಾರ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ದೂರು ನೀಡಿದ್ದಾರೆ. ಕೋಲ್ಕತ್ತಾದಲ್ಲಿ ಮೊಹಮ್ಮದ್ ಶಮಿ ವಿರುದ್ಧ ವರದಕ್ಷಿಣೆ ಕಿರುಕುಳ, ಹತ್ಯೆಗೆ ಯತ್ನ ಸೇರಿದಂತೆ ಅನೇಕ ದೂರು ದಾಖಲಾಗಿದೆ. ಪತ್ನಿ ಆರೋಪವನ್ನು ಶಮಿ ತಳ್ಳಿ ಹಾಕುತ್ತಲೇ ಬಂದಿದ್ದಾರೆ. ಈ ಮಧ್ಯೆ ಶಮಿ ಬೆಂಬಲಕ್ಕೆ ಧೋನಿ ನಿಂತಿದ್ದಾರೆ.

ಮೊಹಮ್ಮದ್ ಶಮಿ ಉತ್ತಮ ವ್ಯಕ್ತಿ. ನನ್ನ ಪ್ರಕಾರ ಅವರು ಪತ್ನಿ ಹಾಗೂ ದೇಶಕ್ಕೆ ಮೋಸ ಮಾಡಲಾರರು. ಇದು ಶಮಿ ವೈಯಕ್ತಿಕ ವಿಚಾರವಾಗಿದ್ದರಿಂದ ನಾನು ಈ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲವೆಂದು ಧೋನಿ ಹೇಳಿದ್ದಾರೆ.

ಇನ್ನು ಮೊಹಮ್ಮದ್ ಶಮಿ ಪತ್ನಿ ಹಸೀನ್ ತಂದೆ ಮೊಹಮ್ಮದ್ ಹಸನ್ ಕೂಡ ಅಳಿಯನ ಬೆಂಬಲಕ್ಕೆ ನಿಂತಿದ್ದಾರೆ. ಶಮಿ ಒಬ್ಬ ಒಳ್ಳೆ ವ್ಯಕ್ತಿ. ತುಂಬಾ ಕಡಿಮೆ ಮಾತನಾಡ್ತಾರೆ. ಅವ್ರ ಮೇಲೆ ನಮಗೆ ಸಂಶಯವಿಲ್ಲ. ಈ ಬಗ್ಗೆ ನನಗೆ ಹೆಚ್ಚಿನ ಮಾಹಿತಿಯಿಲ್ಲ. ಅದು ಅವರಿಬ್ಬರ ವೈಯಕ್ತಿಕ ವಿಷ್ಯವೆಂದು ಹಸನ್ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...