alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್! 2 ಅವಧಿಯಿಂದ ರಣಜಿ ಆಟಗಾರರಿಗೆ ಬಿಸಿಸಿಐ ನೀಡಿಲ್ಲ ಪಂದ್ಯದ ವೇತನ

ಕ್ರಿಕೆಟ್ ಆಟವೆಂದರೆ ಅಲ್ಲಿ ಹಣದ ಹೊಳೆಯೇ ಹರಿಯುತ್ತದೆ. ಅದರಲ್ಲೂ ಭಾರತದಲ್ಲಿ ಕ್ರಿಕೆಟ್ ಗೆ ದೊರೆತ ಪ್ರಾಧಾನ್ಯತೆ ಇತರೆ ಕ್ರೀಡೆಗಳಿಗೆ ಸಿಗುತ್ತಿಲ್ಲವೆಂಬ ಆರೋಪವಿದೆ. ಭಾರತೀಯ ಕ್ರಿಕೆಟ್ ಮಂಡಳಿ ವಿಶ್ವದಲ್ಲೇ ಅತಿ ಶ್ರೀಮಂತ ಸಂಸ್ಥೆ ಎಂಬ ಹಿರಿಮೆ ಹೊಂದಿದ್ದು, ಆದರೆ ಆಟಗಾರರಿಗೆ ವೇತನ ನೀಡುವಲ್ಲಿ ತಾರತಮ್ಯ ನೀತಿ ಅನುಸರಿಸುತ್ತಿರುವುದು ಈಗ ಬೆಳಕಿಗೆ ಬಂದಿದೆ.

ಇತ್ತೀಚೆಗೆಷ್ಟೇ ವಿಶ್ವ ಕಪ್ ಗೆದ್ದ ಅಂಡರ್ 19 ತಂಡಕ್ಕೆ ಲಕ್ಷಾಂತರ ರೂ. ಬಹುಮಾನ ಘೋಷಿಸಿದ ಬಿಸಿಸಿಐ ಕಳೆದ ಎರಡು ಸೀಸನ್ ನಲ್ಲಿ ರಣಜಿ ಆಟಗಾರರಿಗೆ ತನ್ನ ಪಾಲಿನ ಹಣ ನೀಡಿಲ್ಲವೆಂಬುದು ಈಗ ಬಹಿರಂಗವಾಗಿದೆ.

ಸ್ಥಳೀಯ ಪಂದ್ಯಗಳಲ್ಲಿ ಪಾಲ್ಗೊಂಡ ರಣಜಿ ಆಟಗಾರರಿಗೆ ಸಂಭಾವನೆ ನೀಡುವ ವಿಚಾರದಲ್ಲಿ ಬಿಸಿಸಿಐ ನಿರ್ಲಕ್ಷ್ಯ ವಹಿಸಿದ್ದು, ಐಪಿಎಲ್ ಗೆ ಆಯ್ಕೆಯಾದ ಆಟಗಾರರನ್ನು ಹೊರತುಪಡಿಸಿ ಕೆಲ ಆಟಗಾರರು ಈ ಸಂಭಾವನೆ ಮೇಲೆಯೇ ಅವಲಂಬಿತರಾಗಿದ್ದು, ಸಂಭಾವನೆ ನೀಡುವ ವಿಚಾರದಲ್ಲಿ ಬಿಸಿಸಿಐ ನಿರ್ಲಕ್ಷ್ಯ ಈಗ ಚರ್ಚೆಗೆ ಕಾರಣವಾಗಿದೆ.

ಆದರೆ ಸಂಭಾವನೆ ವಿಳಂಬವಾಗಿರುವುದಕ್ಕೆ ಬಿಸಿಸಿಐ ಸಮರ್ಥನೆ ನೀಡಿದ್ದು, ನ್ಯಾಯಮೂರ್ತಿ ಲೋಧಾ ಸಮಿತಿ ನೀಡಿದ ವರದಿಯನ್ವಯ ಹಣಕಾಸು ವಿಚಾರದಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತಿಲ್ಲ. ಶೀಘ್ರದಲ್ಲೇ ರಣಜಿ ಆಟಗಾರರಿಗೆ ಹಣ ಪಾವತಿಸುವುದಾಗಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...