alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ್ತಿ ಡೆಂಗ್ಯೂಗೆ ಬಲಿ

footbal

ಮಹಾಮಾರಿ ಡೆಂಗ್ಯೂ ಜ್ವರದಿಂದ ವಾರಣಾಸಿ ಮೂಲದ ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಪೂನಂ ಚೌಹಾಣ್ ಮೃತಪಟ್ಟಿದ್ದಾರೆ. 29 ವರ್ಷದ ಪೂನಂ ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಐದು ಬಾರಿ ಈಕೆ ಉತ್ತರಪ್ರದೇಶ ಮಹಿಳಾ ಫುಟ್ಬಾಲ್ ತಂಡದ ನಾಯಕಿಯಾಗಿದ್ದರು. ತರಬೇತುದಾರರಾಗುವ ಆಸೆಯಿಂದ ಲೈಸನ್ಸ್ ಕೂಡ ಪಡೆದಿದ್ದರು. ಆದ್ರೆ ಆ ಕನಸು ನನಸಾಗುಷ್ಟರಲ್ಲಿ ಡೆಂಗ್ಯೂಗೆ ಪೂನಂ ಬಲಿಯಾಗಿದ್ದಾರೆ.

ಕಳೆದ ಕೆಲ ದಿನಗಳಿಂದ ರಕ್ತದಲ್ಲಿ ಪ್ಲೇಟ್ ಲೆಟ್ಸ್ ಪ್ರಮಾಣ ಅಪಾರ ಕುಸಿತ ಕಂಡಿದ್ದು, 13,000ಕ್ಕೆ ಬಂದು ನಿಂತಿತ್ತು. ವೈದ್ಯರು ಅವರನ್ನು ಉಳಿಸಲು ಶತಪ್ರಯತ್ನ ಮಾಡಿದರಾದ್ರೂ ಸಾಧ್ಯವಾಗಿಲ್ಲ. ಪೂನಂ ಚೌಹಾಣ್ ಭಾರತ ಫುಟ್ಬಾಲ್ ತಂಡವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದ್ದ ಪ್ರತಿಭಾನ್ವಿತ ಆಟಗಾರ್ತಿ. ಆದ್ರೆ ಆಕೆಯ ಪ್ರತಿಭೆಗೆ ತಕ್ಕ ಪ್ರೋತ್ಸಾಹ ಸಿಕ್ಕಿರಲಿಲ್ಲ, ನಿರುದ್ಯೋಗ ಅವರನ್ನು ಕಾಡುತ್ತಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...